– ಕೋರ್ಟ್‌ಗೆ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಹೇಳಿದ್ದೇನು?
ಬೆಂಗಳೂರು: ಕೊಲೆ ಆರೋಪಿ ದರ್ಶನ್‌ಗೆ ಹೈಕೋರ್ಟ್ (Karnataka Highcourt) ನೀಡಿದ್ದ 6 ವಾರಗಳ ಮಧ್ಯಂತರ ಜಾಮೀನು ಅವಧಿ ಇದೇ ಡಿ.11ಕ್ಕೆ ಮುಕ್ತಾಯವಾಗಲಿದೆ. ಆದ್ರೆ ಅದೇ ದಿನ ದರ್ಶನ್ ಶಸ್ತ್ರ ಚಿಕಿತ್ಸೆಗೆ ವೈದ್ಯರು ತಯಾರಿ ಮಾಡಿಕೊಂಡಿದ್ದಾರೆ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಡಿಸೆಂಬರ್ 11ರಂದು ದರ್ಶನ್ ಶಸ್ತ್ರಚಿಕಿತ್ಸೆಗೆ (Surgery For Darshan) ವೈದ್ಯರು ದಿನಾಂಕ ನಿಗಡಿಪಡಿಸಿದ್ದಾರೆ ಎಂದು ಹಿರಿಯ ವಕೀಲ ಸಿ.ವಿ ನಾಗೇಶ್ (CV Nagesh) ಅವರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ರೆಗ್ಯೂಲರ್ ಬೇಲ್ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. ಅಲ್ಲದೇ ಮುಂದಿನ ಆದೇಶದವರೆಗೆ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಿದೆ. ಇದರಿಂದ ಆರೋಪಿ ದರ್ಶನ್‌ಗೆ ರಿಲೀಫ್ ಸಿಕ್ಕಂತಾಗಿದೆ.
Advertisement
ರೇಣುಕಾಸ್ವಾಮಿ ಕೊಲೆ ಪ್ರಕರದ ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಿತು. ಎಸ್‌ಪಿಪಿ ಪ್ರಸನ್ನಕುಮಾರ್ (SPP Prasannakumar) ಅವರು ಮಧ್ಯಂತರ ಜಾಮೀನು ರದ್ದುಗೊಳಿಸುವಂತೆ ಆಕ್ಷೇಪಣಾ ವಾದ ಮಂಡಿಸಿದರು. ಬಳಿಕ ಇದಕ್ಕೆ ಪ್ರತಿವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್, ಹಲವು ವಿಚಾರಗಳನ್ನು ಕೋರ್ಟ್ ಗಮನಕ್ಕೆ ತಂದರು. ಇದೇ ವೇಳೆ ದರ್ಶನ್‌ಗೆ ನೀಡಲಾಗಿರುವ ಮಧ್ಯಂತರ ಜಾಮೀನು ಅವಧಿಯನ್ನ ವಿಸ್ತರಣೆ ಮಾಡುವಂತೆ ಮನವಿ ಮಾಡಿದರು.
Advertisement
Advertisement
ಬಳ್ಳಾರಿಯ ವೈದ್ಯರ (Ballari Doctors) ವರದಿಯ ಮೇಲೆ ಜಾಮೀನು ಸಿಕ್ಕಿತ್ತು. ಬಿಜಿಎಸ್ ಆಸ್ಪತ್ರೆಯಲ್ಲಿ ಬಳ್ಳಾರಿ ವೈದ್ಯರ ವರದಿ ಒಪ್ಪಿಕೊಂಡರು, ಆಪರೇಷನ್ ಅವಶ್ಯಕತೆ ಇದೆ ಅಂತ ಹೇಳಿದ್ರು. ಡಾಕ್ಟರ್ ಹೇಳಿದ ಹಾಗೇ ನಾವು ಆಪರೇಷನ್ ಮಾಡಿಸಬೇಕು, ನಾವು ಹೇಳಿದಾಗ ಅಪರೇಷನ್ ಮಾಡಿಸೋದಕ್ಕೆ ಆಗೋದಿಲ್ಲ. ಮೂರು ವಾರ ಆಯ್ತು, ನಾಲ್ಕು ಅಯ್ತು ಅಂತ ಅಪರೇಷನ್ ಮಾಡಿಸಿ ಅನ್ನೋದಕ್ಕೆ ಆಗೋಲ್ಲ ಅಂತ ವಾದಿಸಿದರು. ಈ ವೇಳೆ ನೀವು ದಿನಾಂಕ ನಿಗದಿ ಆಗಿದೆ ಅಂದಿದ್ದೀರಿ ಅಲ್ವಾ? ಅಂತ ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಿ.ವಿ ನಾಗೇಶ್, ಹೌದು ಮುಂದೆ ಹೇಳ್ತೀನಿ ಯಾವಾಗ ಅಂತ ಎಂದರು.
Advertisement
ದರ್ಶನ್ ಹೋಗಿ 4 ವಾರ ಆಯ್ತು ಆಪರೇಷನ್ ಮಾಡಿ ಅಂತ ಪಟ್ಟು ಹಿಡಿಯೋದಕ್ಕೆ ಆಗೋಲ್ಲ. ಟೈಂ ಮುಗಿಯುತ್ತಾ ಇದೆ ಅಂತ ಒತ್ತಡ ಮಾಡೋಕೆ ಆಗೋಲ್ಲ, ನ.11-21ನೇ ತಾರೀಖು ನೀಡಿದ ವರದಿಯಲ್ಲಿ ಬಿಪಿ ವ್ಯತ್ಯಾಸ ಇದೆ ಅಂತ, ಡಿಸೆಂಬರ್ 5 ರಂದು ಮತ್ತೊಂದು ವರದಿ ನೀಡಲಾಗಿದೆ. ದರ್ಶನ್‌ಗೆ ಸ್ಟಿರಾಯ್ಡ್ ಇಂಜೆಕ್ಷನ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜನರಲ್ ಅನಸ್ತೇಷಿಯಾ ನೀಡಲು ತಯಾರಿ ಮಾಡಿಕೊಳ್ಳಲು ದೇಹ ಸಮತೋಲನಕ್ಕೆ ತೆಗೆದುಕೊಳ್ಳುಲಾಗುತ್ತೆ. ಪಿಸಿಯೋಥೆರಪಿ ಮತ್ತು ವ್ಯಾಯಾಮ ಮಾಡಲಾಗುತ್ತಿದೆ, ಡಿ.11 ರಂದು ಶಸ್ತ್ರಚಿಕಿತ್ಸೆ ಮಾಡಿಸಲು ತಯಾರಿ ಮಾಡಲಾಗಿದೆ, ಹೀಗಾಗಿ ದರ್ಶನ್ ಯಾವುದೇ ಮಧ್ಯಂತರ ಆದೇಶ ಉಲ್ಲಂಘನೆ ಮಾಡಿಲ್ಲ, ದಯಮಾಡಿ ಇದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದರು.
ಇದೇ ವೇಳೆ ರೆಗ್ಯೂಲರ್ ಬೇಲ್‌ಗೂ ಎಸ್‌ಪಿಪಿ ಆಕ್ಷೇಪ ವಾದಕ್ಕೆ ಪ್ರತಿವಾದ ಮಂಡಿಸಿದ ಸಿ.ವಿ ನಾಗೇಶ್, ರೇಣುಕಾಸ್ವಾಮಿ ದೇಹದ ಮೇಲೆ 39 ರಕ್ತದ ಕಲೆಗಳು ಇವೆ ಎಂದು ಹೇಳ್ತಾ ಇದ್ದಾರೆ. ಆದ್ರೆ ಬ್ಲೋಡಿಂಗ್ ಇಂಜುರಿ ಇದ್ದದ್ದು ಒಂದೇ ಒಂದು.. ರೇಣುಕಾಸ್ವಾಮಿ ಮೃತದೇಹದಲ್ಲಿ 2.5 ಸೆಂಟಿ ಮೀಟರ್ ಗಾಯ ಮಾತ್ರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷಾ ವರದಿಯನ್ನು ಪ್ರಾಸಿಕ್ಯೂಷನ್ ಜೊತೆ ಸೇರಿ ವೈದ್ಯರು ತಿರುಚಿದ್ದಾರೆ. ಪ್ರತಿ ಹಂತದಲ್ಲಿ ಕೂಡ ಪ್ರಾಸಿಕ್ಯೂಷನ್ ಸುಳ್ಳು ಹೇಳುತ್ತಾ ಬರುತ್ತಾ ಇದೆ? ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲು ಮಾಡೋದ್ರಿಂದ ಹಿಡಿದು ಮಹಜರು ಮಾಡುವ ತನಕ ಸುಳ್ಳು ಹೇಳಿದೆ ಎಂದು ಪ್ರಬಲ ವಾದ ಮಂಡಿಸಿದರು.
ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ದರ್ಶನ್ ಸೇರಿ 7 ಜನರ ಜಾಮೀನು ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. ಅಲ್ಲದೇ ರೆಗ್ಯೂಲರ್ ಬೇಲ್ ಸಿಗುವವರೆಗೆ ಮಧ್ಯಂತರ ಜಾಮೀಜು ಅವಧಿಯನ್ನ ವಿಸ್ತರಣೆ ಮಾಡಿದೆ.