Sunday, 19th August 2018

ತಾರಕ್ ಸಿನಿಮಾದ ಯಶಸ್ಸಿಗಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ದರ್ಶನ್

ಬೆಂಗಳೂರು: ಇತ್ತೀಚಿಗೆ ದರ್ಶನ್ ಅಭಿನಯದ ತಾರಕ್ ಸಿನಿಮಾ ರಾಜ್ಯಾದ್ಯಾಂತ ಬಿಡುಗಡೆಯಾಗಿದ್ದು, ಸಾಕಷ್ಟು ಸುದ್ದಿ ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ತನ್ನದೇ ಚಾಪನ್ನು ಮೂಡಿಸಿ ಮುನ್ನುಗ್ಗುತ್ತಿದೆ. ದರ್ಶನ್ ತಮ್ಮ ಖುಷಿಯನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ಶುಕ್ರವಾರ ಬಿಡುಗೆಡೆಯಾದ ತಾರಕ್ ಸಿನಿಮಾ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದ್ದು, ದರ್ಶನ್ ತಮ್ಮ ಖುಷಿಯನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. “ನಿಮ್ಮ ಪ್ರೀತಿ-ಅಭಿಮಾನ-ಪ್ರೋತ್ಸಾಹಕ್ಕೆ ಈ ನಿಮ್ಮ ದಾಸ ಯಾವಗ್ಲೂ ಚಿರಋಣಿ. ತಾರಕ್ ರಾಮ್, ಎಲ್ಲರೂ ಪ್ರೀತಿಯಿಂದ ‘ತಾರಕ್’ ಅಂತ ಕರೀತಾರೆ”. ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ಪಕ್ಕಾ ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್ ಆದ ತಾರಕ್ ಸಿನಿಮಾ ಫ್ಯಾಮಿಲಿ ಆಡಿಯನ್ಸ್‍ನನ್ನು ಸಾಕಷ್ಟು ಸೆಳೆಯುತ್ತಿದೆ. ತಾರಕ್ ಸಿನಿಮಾ ತಾತ ಹಾಗೂ ಮೊಮ್ಮಗನ ನಡುವೆ ಇರುವ ಕಥೆ. ಈ ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ತಾತನ ಪಾತ್ರದಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ಸಾನ್ವಿ ಶ್ರೀವಾಸ್ತವ್ ಹಾಗೂ ಶ್ರುತಿ ಹರಿಹರನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *