ದರ್ಶನ್ ಮಗನಿಗೆ ಡಿ ಕಂಪನಿಯಿಂದ ಸಿಕ್ತು ಅಪರೂಪದ ಗಿಫ್ಟ್

Public TV
1 Min Read
darshan son

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರ ವಿನೀಶ್ ಗೆ ಹುಟ್ಟು ಹಬ್ಬದ ಪ್ರಯುಕ್ತ ಡಿ ಕಂಪನಿ ವತಿಯಿಂದ ಒಂದು ಅಪರೂಪದ ಉಡುಗೊರೆ ಸಿಕ್ಕಿದೆ.

ಅಕ್ಟೋಬರ್ 31 ಬುಧವಾರ ವಿನೀಶ್ ತಮ್ಮ 10 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಂದು ಅಭಿಮಾನಿಗಳು ಅವರ ಮನೆಯ ಬಳಿ ಕಾದು ಕೇಕ್ ಕಟ್ ಮಾಡಿಸಿ ಸನ್ಮಾನ ಮಾಡಿ ಶುಭಾಶಯವನ್ನು ತಿಳಿಸಿದ್ದರು. ಡಿ ಕಂಪನಿಯ ಅವರು ಬರ್ತ್ ಡೇ ಸ್ಪೆಷಲ್ ಆಗಿ ವಿನೀಶ್ ಗೆ ಅಪರೂಪದ ಗಿಫ್ಟ್ ಕೊಟ್ಟಿದ್ದಾರೆ.

VINEESH

ಡಿ ಕಂಪನಿ ಅವರು ವಿನೀಶ್‍ಗೆ ಒಂದು ಫೋಟೋವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಆ ಫೋಟೋದಲ್ಲಿ ಒಂದು ವಿಶೇಷತೆ ಇದೆ. ಅದೇನೆಂದರೆ ಗಂಧದ ಗುಡಿಯ ಒಂದು ಝಲಕನ್ನು ನೆನಪಿಸುವಂತಿದೆ. ಅಂದರೆ ದರ್ಶನ್ ಹೆಗಲ ಮೇಲೆ ವಿನೀಶ್ ಕೂತಿದ್ದು, ಇಬ್ಬರ ಒಂದು ಕೈಯನ್ನು ಮೇಲೆ ಎತ್ತಿ ಆಕಾಶವನ್ನು ತೋರಿಸುವಂತಿದೆ. ‘ಗಂಧದ ಗುಡಿ’ ಸಿನಿಮಾದಲ್ಲಿ ಹಾಡೊಂದರಲ್ಲಿ ದಿವಂಗತ ಡಾ. ರಾಜ್ ಕುಮಾರ್ ಹೇಗೆ ಪೋಸ್ ಕೊಟ್ಟಿದ್ದಾರೋ ಅದೇ ರೀತಿಯಾಗಿ ದರ್ಶನ್ ನಿಂತಿದ್ದಾರೆ.

ತನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದವರಿಗೆ ವಿಡಿಯೋ ಮೂಲಕ ವಿನೀಶ್,”ನನ್ನ ಬರ್ತ್ ಡೇಗೆ ಶುಭಾಶಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಕ್ಸ್. ನಿಮ್ಮ ಪ್ರೀತಿ, ಆಶೀರ್ವಾದ ಸದಾ ಎಲ್ಲರ ಮೇಲು ಇರಲಿ. ನನ್ನ ಮೇಲು ಸ್ವಲ್ಪ ಇರಲಿ” ಎಂದು ಧನ್ಯವಾದಗಳನ್ನು ತಿಳಿಸಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article