ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೇಣುಕಾಸ್ವಾಮಿ (Renukaswamy Murder Case) ಕೊಲೆ ಪ್ರಕರಣದ ಆರೋಪಿ ದರ್ಶನ್ (Darshan) ಅವರನ್ನು ಪೊಲೀಸರು ಬಳ್ಳಾರಿ ಜೈಲಿಗೆ ಕರೆ ತಂದಿದ್ದಾರೆ.
ಇಂದು ಚಿಕ್ಕಬಳ್ಳಾಪುರ, ಬಾಗೆಪಲ್ಲಿ, ಅನಂತಪುರ ಮಾರ್ಗವಾಗಿ ಬಳ್ಳಾರಿ ಕರೆ ತರಲಾಗಿದೆ. ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿಗೆ ತರಲಾಯಿತು.
ಬೆಳಗ್ಗೆ 4 ಗಂಟೆಯ ವೇಳೆಗೆ ಪರಪ್ಪನ ಅಗ್ರಹಾರದಿಂದ ಹೊರಟ ವಾಹನ ಮೇಕ್ರಿ ವೃತ್ತ, ಹೆಬ್ಬಾಳ ರಸ್ತೆ, ಯಲಹಂಕ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬಳ್ಳಾರಿಯತ್ತ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಗಿತ್ತು. ಟೀ ಶರ್ಟ್, ಜೀನ್ಸ್, ಬೆಡ್ ಶೀಟ್ ಹಿಡಿದುಕೊಂಡು ದರ್ಶನ್ ಜೈಲು ಪ್ರವೇಶಿಸಿದ್ದಾರೆ.
ದರ್ಶನ್ ಬರುತ್ತಿರವ ವಿಚಾರ ಮೊದಲೇ ತಿಳಿದಿದ್ದರಿಂದ ಜೈಲಿನ ರಸ್ತೆಯಲ್ಲಿ ಜನರು ನಿಂತಿದ್ದರು.