ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಂದ ದವಸಧಾನ್ಯಗಳನ್ನು ಅವರ ಆಪ್ತರು ಹಾಗೂ ಅಭಿಮಾನಿಗಳು ತುಮಕೂರಿನ ಸಿದ್ಧಗಂಗಾ ಮಠ ಹಾಗೂ ರಾಜ್ಯದ ಹಲವು ಅನಾಥಶ್ರಮ, ವೃದ್ಧಾಶ್ರಮಕ್ಕೆ ನೀಡಿದ್ದಾರೆ.
ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಬಂದಂತಹ ದವಸಧಾನ್ಯಗಳನ್ನು ಮಂಗಳವಾರ ರಾಜ್ಯದ ಹಲವು ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸಿದ್ಧಗಂಗಾ ಮಠಕ್ಕೆ ಹೋಗಿದೆ. ಕಳೆದ ಎರಡು ದಿನಗಳಿಂದ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ ಸೇರಿದಂತೆ ಹಲವು ಪದಾರ್ಥಗಳನ್ನು ವಿಗಂಡಿಸಿದ ದರ್ಶನ್ ಬಳಗ ಲಾರಿಗಳಲ್ಲಿ ತುಂಬಿಕೊಂಡು ಅನಾಥಾಶ್ರಮ ಹಾಗೂ ವೃದ್ಧಾಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಕೇಕ್ ಕತ್ತರಿಸದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಚಂದನವನದ ಒಡೆಯ
Advertisement
Advertisement
ದರ್ಶನ್ ಆಪ್ತರು ಹಾಗೂ ಅಭಿಮಾನಿಗಳು ಮಂಗಳವಾರ ತುಮಕೂರಿನ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ದವಸಧಾನ್ಯಗಳನ್ನು ತಲುಪಿಸಿದ್ದಾರೆ. ದವಸಧಾನ್ಯದ ಜೊತೆ ದರ್ಶನ್ ಅವರು ಅದರ ಕ್ವಾಲಿಟಿ ಪತ್ರವನ್ನು ಬರೆದು ಕಳುಹಿಸಿದ್ದಾರೆ. ಇದನ್ನೂ ಓದಿ: ಬರ್ತ್ ಡೇಗೂ ಮುನ್ನವೇ ದರ್ಶನ್ ಮನೆ ತಲುಪಿದ ಗಿಫ್ಟ್
Advertisement
ನನ್ನ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಉಡುಗೊರೆಯಾಗಿ ನೀಡಿರುವ ಅಕ್ಕಿ, ಸಕ್ಕರೆ, ಬೇಳೆ, ಅಡುಗೆ ಎಣ್ಣೆ ಹಾಗೂ ಇತರೆ ಆಹಾರ ಪದಾರ್ಥಗಳನ್ನು ನಿಮ್ಮ ಅನಾಥಶ್ರಮ/ ವೃದ್ಧಾಶ್ರಮಕ್ಕೆ ನೀಡುತ್ತಿದ್ದೇನೆ. ದಯವಿಟ್ಟು ತಾವುಗಳು ಇದರ ಗುಣಮಟ್ಟವನ್ನು ಪರೀಕ್ಷಿಸಿ ಬಳಿಕ ಅಡುಗೆಗೆ ಉಪಯೋಗಿಸಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ ಎಂದು ಪತ್ರದಲ್ಲಿ ಬರೆದಿದ್ದಾರೆ.
Advertisement
ದರ್ಶನ್ ಹುಟ್ಟುಹಬ್ಬದ ಮೊದಲೇ ಅವರ ಅಭಿಮಾನಿಯೊಬ್ಬರು ಲೋಡ್‍ಗಟ್ಟಲೆ ಅಕ್ಕಿ ಮೂಟೆಗಳನ್ನು ಅವರ ಮನೆಗೆ ತಲುಪಿಸಿದ್ದರು. ಅಷ್ಟೇ ಅಲ್ಲದೇ ಆರ್.ಆರ್ ನಗರದ ದರ್ಶನ್ ನಿವಾಸದ ಮುಂದೆ ಬ್ಯಾರಿಕೇಡ್ ಹಾಕಿ ವೇದಿಕೆ ರೆಡಿಮಾಡಲಾಗಿತ್ತು. ತಮ್ಮ ಹುಟ್ಟುಹಬ್ಬಕ್ಕೆ ಗಿಫ್ಟ್ ರೂಪದಲ್ಲಿ ಸಿಗುವ ಎಲ್ಲಾ ಧಾನ್ಯಗಳನ್ನು ಪ್ರತಿ ಜಿಲ್ಲೆಯ ಒಂದು ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸಿದ್ಧಗಂಗಾ ಮಠಕ್ಕೆ ನೀಡುವ ಜವಾಬ್ದಾರಿಯನ್ನು ದರ್ಶನ್ ಹೊತ್ತುಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv