ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೊಸ ವರ್ಷ ಏಕೆ ಆಚರಿಸಲ್ಲ ಎಂಬುದನ್ನು ರಿವೀಲ್ ಮಾಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದರ್ಶನ್ ಅವರು, “ಹೊಸ ವರ್ಷದ ಆಚರಣೆಯಿಂದ ನಾನು ಯಾವಾಗಲೂ ದೂರವಿರುತ್ತೇನೆ. ಏಕೆಂದರೆ ನಾನು ಇಡೀ ವರ್ಷ ಪಾರ್ಟಿ ಮಾಡುತ್ತಿರುತ್ತೇನೆ. ಡಿಸೆಂಬರ್ 31ನೇಯ ರಾತ್ರಿ ನನಗೆ ವಿಶೇಷ ಎಂದು ಅನಿಸುವುದಿಲ್ಲ. ಜನವರಿ 1ರಂದು ಕೆಲಸ ಮಾಡುತ್ತೇನೆ. ಆ ದಿನ ನಾನು ಬೆಳಗ್ಗೆ ಬೇಗ ಎದ್ದು ದಿನವಿಡೀ ಕೆಲಸ ಮಾಡುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನಟಿ ಊರ್ವಶಿ ವಿರುದ್ಧ ಅಸಮಾಧಾನ ಹೊರಹಾಕಿದ ದರ್ಶನ್
ಇದೇ ವೇಳೆ ಅಪಘಾತದಲ್ಲಿ ಗಾಯಗೊಂಡ ಕೈ ಇನ್ನು ನೋವಿದೆ ಎಂಬುದನ್ನು ತಿಳಿಸಿದ್ದಾರೆ. ನೋವು ಎಷ್ಟೇ ಇದ್ದರೂ ಕೆಲಸ ಮಾಡಲೇಬೇಕು. ನನಗೆ ಒಳ್ಳೆಯ ವೈದ್ಯ ಡಾ. ಅಜಯ್ ಹೆಗಡೆ ಎಂಬವರು ಸಿಕ್ಕಿದ್ದಾರೆ. ಅವರ ನನಗೆ ಸಲಹೆ ನೀಡುತ್ತಿರುತ್ತಾರೆ. ಅಜಯ್ ಹೆಗಡೆ ಅವರು ಮೊದಲು ಬಾಡಿ ಬಿಲ್ಡರ್ ಆಗಿದ್ದು, ಮಿ. ಕರ್ನಾಟಕ ಆಗಿದ್ದವರು. ಫಿಟ್ನೆಸ್ ಬಗ್ಗೆ ಅವರು ನನಗೆ ಸಲಹೆ ನೀಡುತ್ತಿರುತ್ತಾರೆ ಎಂದು ದರ್ಶನ್ ಹೇಳಿದ್ದಾರೆ. ಇದನ್ನೂ ಓದಿ: ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ: ದರ್ಶನ್
ದರ್ಶನ್ ಅಭಿನಯದ `ಒಡೆಯ’ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ದರ್ಶನ್ ಗಜೇಂದ್ರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜೋಡಿಯಾಗಿ ನಟಿ ಸನಾ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ. ಇದೊಂದು ಅಣ್ಣ-ತಮ್ಮಂದಿರ ಚಿತ್ರವಾಗಿದ್ದು, ಬಹುದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.