ಕಳೆದ 10 ದಿನಗಳಿಂದ ರಾಜಸ್ಥಾನದಲ್ಲಿ (Rajasthan) ನಡೆಯುತ್ತಿದ್ದ ಡೆವಿಲ್ (Devil) ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ನಟ ದರ್ಶನ್ (Actor Darshan) ಇಂದು ಬೆಂಗಳೂರಿಗೆ (Bengaluru) ಮರಳಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಡೆವಿಲ್ ಶೂಟಿಂಗ್ ಭರ್ಜರಿಯಾಗಿ ನಡೆದಿದ್ದು, ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ದರ್ಶನ್‌ಗೆ ಸಾಥ್ ನೀಡಿದ್ದರು. ಚಿತ್ರೀಕರಣ ಮುಗಿಸಿ ಇಂದು ಮಧ್ಯಾಹ್ನ ನಟ ದರ್ಶನ್ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಬೆಂಗಳೂರಿಗೆ ವಾಪಸ್ಸಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.ಇದನ್ನೂ ಓದಿ: EXCLUSIVE: ಆಶ್ರಯ ಇಲ್ಲದೆ ವೃದ್ಧಾಶ್ರಮ ಸೇರಿದ ಹಿರಿಯ ನಟಿ ಶೈಲಶ್ರೀ – ನಟಿಗೆ ಧನ ಸಹಾಯ ಮಾಡಿದ ದರ್ಶನ್
ಇತ್ತೀಚಿಗಷ್ಟೇ ವಿಜಯಲಕ್ಷ್ಮಿ (Vijayalakshmi Darshan) ಅವರು ರಾಜಸ್ಥಾನದ ಕೆಲವು ಸ್ಥಳಗಳಿಗೆ ಭೇಟಿ ನೀಡಿದ ಫೋಟೋಗಳನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.
ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಡೆವಿಲ್ ಚಿತ್ರ ಹೊರಬರುತ್ತಿದ್ದು, ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ, ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿದಂತೆ ಇನ್ನಿತರರು ತೆರೆಹಂಚಿಕೊಂಡಿದ್ದಾರೆ.ಇದನ್ನೂ ಓದಿ: ‘ಡೆವಿಲ್’ ಶೂಟಿಂಗ್‌ಗಾಗಿ ರಾಜಸ್ಥಾನದಲ್ಲಿ ಪತಿ ಜೊತೆ ವಿಜಯಲಕ್ಷ್ಮಿ