ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ (Darshan) ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆ ಪುತ್ರ ವಿನೀಶ್ (Vinish Darshan) ರಿಯಾಕ್ಷನ್ ಕೊಟ್ಟಿದ್ದಾರೆ. ಕಿಂಗ್ ಇಮೋಜಿ ಹಾಕಿ ಅಪ್ಪನ ಆಗಮನದ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ದರ್ಶನ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ಟೆಂಪಲ್ ರನ್
ದರ್ಶನ್ 6 ವಾರಗಳ ಕಾಲ ಮಧ್ಯಂತರ ಜಾಮೀನು (Bail) ಸಿಕ್ಕ ಹಿನ್ನೆಲೆ ಜೈಲಿನಿಂದ ರಿಲೀಸ್ ಆಗಿದ್ದಾರೆ. ಇದೇ ಖುಷಿಯಲ್ಲಿ ಕಿಂಗ್ ಇಮೋಜಿ ಹಾಕಿ ತಂದೆ ಮತ್ತು ಮಗನ ಬಾಂಧವ್ಯದ ಸಾಂಗ್ ಅನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ದರ್ಶನ್ ಪುತ್ರ ವಿನೀಶ್ ಹಂಚಿಕೊಂಡಿದ್ದಾರೆ. ತಂದೆಯ ಆಗಮನದ ಸಂಭ್ರಮದಲ್ಲಿದ್ದಾರೆ.
ಇನ್ನೂ ನಾಳೆ (ಅ.31) ವಿನೀಶ್ ಹುಟ್ಟುಹಬ್ಬದ ಸಂಭ್ರಮ. ದೀಪಾವಳಿ ಹಬ್ಬ ಮತ್ತು ಹುಟ್ಟುಹಬ್ಬವನ್ನು ಎರಡನ್ನು ತಂದೆಯ ಜೊತೆ ವಿನೀಶ್ ಆಚರಿಸಿಕೊಳ್ಳಲಿದ್ದಾರೆ.