ಕೊಲೆ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್‌ಗೆ (Darshan) ಜೈಲಿನಿಂದ ರಿಲೀಸ್ ಆಗಿದ್ದಕ್ಕೆ ನಟಿ ಸೋನಲ್ (Sonal Monterio) ಸಂತಸ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಕುರಿತು ನಟಿ ರಿಯಾಕ್ಟ್ ಮಾಡಿದ್ದಾರೆ.
ದರ್ಶನ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆದ ಬೆನ್ನಲ್ಲೇ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಥ್ಯಾಂಕ್ ಗಾಡ್’ ಎಂದು ದೇವರಿಗೆ ಧನ್ಯವಾದ ತಿಳಿಸಿದ್ದಾರೆ ಸೋನಲ್. ಇದನ್ನೂ ಓದಿ:ದರ್ಶನ್‌ಗೆ ಬೇಲ್ ಸಿಕ್ಕಿದ್ದಕ್ಕೆ ಮನಸ್ಸು ನಿರಾಳ ಆಗಿದೆ: ತರುಣ್ ಸುಧೀರ್
ಇನ್ನೂ ದರ್ಶನ್ ಆಪ್ತ ಬಳಗದಲ್ಲಿ ಸೋನಲ್ ಗುರುತಿಸಿಕೊಂಡಿದ್ದಾರೆ. ಅವರೊಂದಿಗೆ ‘ರಾಬರ್ಟ್’ (Robert) ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ಇದೇ ಆ.11ರಂದು ತರುಣ್ ಜೊತೆ ಹಸೆಮಣೆ ಏರಿದ್ದರು. ಈ ಸಂದರ್ಭದಲ್ಲಿ ದರ್ಶನ್ ಅನುಪಸ್ಥಿತಿ ಅನ್ನು ನೆನೆದು ಸೋನಲ್ ಕಣ್ಣೀರಿಟ್ಟಿದ್ದರು.