ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಂದಲೇ ಸೋರಿಕೆ ಆಗಿರುವ ದರ್ಶನ್ (Actor Darshan) ಐಷಾರಾಮಿ ಜೀವನ ನಡೆಸ್ತಿರೋ ಫೋಟೋ ಹತ್ತಾರು ಚರ್ಚೆಗಳಿಗೆ ಕಾರಣವಾಗಿದೆ. ಇದರಿಂದ ನಟ ದರ್ಶನ್‌ಗೆ ಇನ್ನಷ್ಟು ಸಂಕಷ್ಟ ಎದುರಾಗಬಹುದು ಎನ್ನಲಾಗಿದೆ. ಫೋಟೋ ಸಂಬಂಧ ಈಗಾಗಲೇ ಆಂತರಿಕ ತನಿಖೆಗೂ ಆದೇಶ ನೀಡಲಾಗಿದ್ದು, ಅಧಿಕಾರಿಗಳಿಗೆ ಕಂಟಕ ಎದುರಾಗಲಿದೆ.
ಅಬ್ಬಾಬ್ಬ ಈ ಫೋಟೋ ನೋಡಿದ್ರೆ.. ಎಂತಹವರಿಗೂ ಇದು ಜೈಲಾ? ಯಾವುದೋ ರೆಸಾರ್ಟ್ ಇರಬೇಕು ಅಂತ ಫೀಲ್ ಆಗುತ್ತೆ.. ಅಷ್ಟರ ಮಟ್ಟಿಗೆ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಲೈಫ್ ಲೀಡ್ ಮಾಡ್ತಿದ್ದಾರೆ. ಇದನ್ನೂ ಓದಿ: Exclusive Video | ಸೆಂಟ್ರಲ್ ಜೈಲಲ್ಲಿ ಕೊಲೆ ಆರೋಪಿ ದರ್ಶನ್ ಬಿಂದಾಸ್?
Advertisement
Advertisement
ನಟ ದರ್ಶನ್ ಹೊರಗೆ ಹೇಗೆಲ್ಲಾ ಬಿಂದಾಸ್ ಜೀವನ ನಡೆಸ್ತಿದ್ರೋ, ಅದೇ ರೀತಿ ಜೈಲಲ್ಲಿಯೂ ಇರುವಂತೆ ಕಾಣ್ತಿದೆ. ದರ್ಶನ್‌ಗೆ ಬೇಕಿರೋ ವ್ಯವಸ್ಥೆಗಳೆಲ್ಲಾ ಮಾಡಿಕೊಡ್ತಿರೋ ಶಂಕೆಗೆ ಜೈಲಿಂದ ಸೋರಿಕೆ ಆಗಿರುವ ಫೋಟೋಗಳು ಕಾರಣವಾಗಿದೆ. ಅಷ್ಟಕ್ಕೂ ಜೈಲು ನಿಯಮ ಏನು ಹೇಳುತ್ತದೆ? ವಿಚಾರಣಾಧೀನ ಕೈದಿಗೆ ಏನೆಲ್ಲಾ ಸವಲತ್ತು ಸಿಗುತ್ತವೆ? ಏನೆಲ್ಲಾ ಸಿಗಲ್ಲ ಅನ್ನೋದನ್ನು ನೋಡೋಣ..
Advertisement
ಜೈಲು ನಿಯಮ ಏನು ಹೇಳುತ್ತದೆ?
* ವಿಚಾರಣಾಧೀನ ಕೈದಿಗೆ ಅಗತ್ಯ ವಸ್ತು ಹೊರತುಪಡಿಸಿ ಉಳಿದ ಸೌಲಭ್ಯ ನೀಡುವಂತಿಲ್ಲ
* ಕೋರ್ಟ್ ಅನುಮತಿಯಿಲ್ಲದೇ ಮನೆಯೂಟ ಸೇರಿ ಇತರೆ ಸೌಲಭ್ಯಗಳಿಗೆ ಅವಕಾಶ ಇಲ್ಲ
* ಜೈಲಿನ ಲಾನ್‌ನಲ್ಲಿ ಚೇರ್-ಟೀಪಾಯಿ ಹಾಕಿಕೊಂಡು ಕುಳಿತು ಮಾತನಾಡುವ ವ್ಯವಸ್ಥೆ ಮಾಡುವಂತಿಲ್ಲ
* ಜೈಲಿನ ಎಲ್ಲೆಂದರಲ್ಲಿ ಕುಳಿತು ಸಿಗರೇಟ್.. ಬೀಡಿ ಸೇವನೆ ಮಾಡುವಂತಿಲ್ಲ
* ಜೈಲಿಗೆ ಸಿಗರೇಟು, ಮಾದಕ ವಸ್ತು, ಮದ್ಯ ಸರಬರಾಜು… ಸೇವನೆ ಶಿಕ್ಷಾರ್ಹ ಅಪರಾಧ
* ವಿಚಾರಣಾಧೀನ ಕೈದಿ ವಿಐಪಿ ಸೆಲ್‌ನಲ್ಲಿದ್ದರೂ ಸ್ಪೆಷಲ್ ಸೆಕ್ಯೂರಿಟಿ ಕೊಡುವಂತಿಲ್ಲ..
Advertisement
ಗ್ಯಾಂಗ್‌ಸ್ಟರ್‌ಗಳ ಜೊತೆ ನಾನು ಕಾಣಿಸಿಕೊಂಡ್ರೆ ಜನ ಏನಂತಾರೆ ಅನ್ನೊ ಸಣ್ಣ ಪಶ್ಚಾತ್ತಾಪವಾದ್ರು ದರ್ಶನ್‌ಗೆ ಇರಬೇಕಿತ್ತು. ಜೈಲಲ್ಲಿ ಕಾಸು ಕೊಟ್ರೆ ಏನು ಬೇಕಾದ್ರು ಕೊಡ್ತಾರೆ. ಜೈಲಿನಿಂದ ಬೊರಬರಲು ಹಾತೋರೆಯುತ್ತಿರುವ ದರ್ಶನ್‌ಗೆ ಈ ಫೋಟೋ ಸಹ ಸಂಕಷ್ಟ ತಂದೊಡ್ಡಬಹುದು. ದರ್ಶನ್‌ಗೆ ಗ್ಯಾಂಗ್‌ಸ್ಟರ್‌ಗಳು, ರೌಡಿಗಳ ಜೊತೆ ನಂಟಿದೆ, ಹೊರಗೆ ಬಂದ್ರೆ ಸಾಕ್ಷಿಗಳಿಗೆ ಬೆದರಿಕೆ ಹಾಕ್ತಾರೆ ಬೇಲ್ ಕೊಡಬೇಡಿ ಅಂತಾ ಎಸ್‌ಪಿಪಿಗೆ ವಾದಿಸೋಕೆ ಇದೊಂದೇ ಪೋಟೊ ಸಾಕು ಅಂತಾರೆ ನಿವೃತ್ತ ಎಸ್ಪಿ ಎಸ್.ಕೆ ಉಮೇಶ್. ಇದನ್ನೂ ಓದಿ: ಅಲ್ತಾಫ್‌ನನ್ನು ಮುಸ್ಲಿಂ ಸಮುದಾಯದಿಂದ ಬಹಿಷ್ಕರಿಸಲು ತೀರ್ಮಾನ: ಮುಸ್ಲಿಂ ಮುಖಂಡ
ಆಂತರಿಕ ತನಿಖೆಗೆ ಆದೇಶ:
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಹಾಗೂ ರೌಡಿಗಳ ಜೊತೆ ಫೋಟೊ ವೈರಲ್ ಬೆನ್ನಲ್ಲೇ ಆಂತರಿಕ ತನಿಖೆಗೆ ಕಾರಾಗೃಹಗಳ ಡಿ.ಜಿ ಮಾಲಿನಿ ಕೃಷ್ಣಮೂರ್ತಿ ಆದೇಶ ನೀಡಿದ್ದಾರೆ. ರಾಜಾತಿಥ್ಯ ನೀಡಿದ ವಿಚಾರ ಹಾಗೂ ರೌಡಿಗಳ ಜೊತೆ ಇರಲು ಬಿಟ್ಟಿದ್ದು ಯಾರು? ಅನ್ನೋದನ್ನ ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ. ಪೊಲೀಸ್ ಅಧಿಕಾರಿಗಳಾದ ಆನಂದ್ ರೆಡ್ಡಿ ಹಾಗೂ ಸೋಮಶೇಖರ್‌ಗೆ ಸೂಚನೆ ನೀಡಿದ್ದು, ಬಹುತೇಕ ಸೋಮವಾರ ಅಥವಾ ಇವತ್ತು (ಭಾನುವಾರ) ರಾತ್ರಿಯೇ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅಧಿಕಾರಿಗಳ ವಿಚಾರಣೆ, ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿ, ಏನೆಲ್ಲಾ ರಾಜಾತಿಥ್ಯ ನೀಡಲಾಗಿತ್ತು ಅನ್ನೋ ಕುರಿತಾಗಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಜೈಲು ಮ್ಯಾನ್ಯುವೆಲ್ ಹೇಳೋದೇನು?
ಕೋರ್ಟ್ ನಿರ್ದೇಶನ ಕೊಡದೇ ಹೊರಗಿನ ಯಾವ ವಸ್ತುಗಳನ್ನೂ ವಿಚಾರಣಾಧೀನ ಕೈದಿ ಮತ್ತು ಸಾಮಾನ್ಯ ಕೈದಿಗೆ ಕೊಡುವ ಹಾಗಿಲ್ಲ. ವಿಐಪಿ ಸೆಲ್ ನಲ್ಲಿ ಇದ್ದರೂ ವಿಶೇಷ ಭದ್ರತೆ ಕೊಡುವಂತಿಲ್ಲ. ಸ್ಪೆಷಲ್ ಸೆಕ್ಯೂರಿಟಿ ಕೊಡುವಂತೆ ಕೋರ್ಟ್ ಡೈರೆಕ್ಷನ್ ಕೊಡಬೇಕು. ಸಿಗರೇಟು, ಮಾದಕ ವಸ್ತು ಮತ್ತು ಮದ್ಯ ಜೈಲಿನೊಳಗೆ ಹೋಗೋದು ಅಪರಾಧ. ಅದನ್ನು ಸೇವಿಸಿದ್ದು ಸಾಬೀತಾದರೆ ಶಿಕ್ಷೆ. ವಿಪಿಐ ಸೆಲ್ ನಲ್ಲಿ ಇರುವವರಿಗೆ ಒಳ್ಳೆಯ ಕಾಟ್, ಬೆಡ್, ಟಿವಿ, ಫ್ಯಾನ್ ಕೊಡಬಹುದು. ಆದರೆ, ಲ್ಯಾನ್ ನಲ್ಲಿ ಕೂತು ಮಾತಾಡುವಂಥ ವ್ಯವಸ್ಥೆ ಮಾಡುವಂತಿಲ್ಲ. ರೌಡಿಗಳ ಜೊತೆ ಮತ್ತು ಇತರ ಕೈದಿಗಳ ಜೊತೆ ಮಾತಾಡಬಹುದು. ಆದರೆ, ಲ್ಯಾನ್ ನಲ್ಲಿ ಚೇರ್ ಹಾಕಿಕೊಂಡು ಕೂತು ಮಾತಾಡುವಂತಿಲ್ಲ. ಸಾಕ್ಷ್ಯನಾಶದಂತ ವಿಷಯಗಳನ್ನು ಮಾತಾಡುವಂತಿಲ್ಲ. ಸಿಗರೇಟು ಒಳಗೆ ಬಂದಿದ್ದು ಮತ್ತು ಅವನು ಅದನ್ನು ಉಪಯೋಗಿಸ್ತಾ ಇರೋದು ಸಾಬೀತಾದರೆ.. ಜೈಲಾಧಿಕಾರಿ ಮೇಲೆ ಆಕ್ಷನ್ ತಗೋಬೋದು.