ಬೆಂಗಳೂರು: ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಇಂದು ನಟಿ, ಸಂಸದೆ ಸುಮಲತಾ ಅಂಬರೀಶ್ ಭಾಗಿಯಾಗಿದ್ದಾರೆ. ಈ ವೇಳೆ ದರ್ಶನ್ ನನ್ನ ದತ್ತು ಮಗನಲ್ಲ ಸ್ವಂತ ಮಗ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.
ಮುಹೂರ್ತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಕ್ ಲೈನ್ ಪ್ರೊಡಕ್ಷನ್ ಹಾಗೂ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ದರ್ಶನ್ ನಟನೆಯ ಸಿನಿಮಾ ಇದಾಗಿದ್ದು, ಸಿನಿಮಾ ಯಶಸ್ಸಿನಲ್ಲಿ ಇತಿಹಾಸ ಸೃಷ್ಟಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಮದಕರಿ ನಾಯಕನ ಪಾತ್ರದಿಂದ ಚಿತ್ರ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ: ದರ್ಶನ್
Advertisement
Advertisement
ಐತಿಹಾಸಿಕ ಚಿತ್ರದಲ್ಲಿ ದರ್ಶನ್ ನಟಿಸುತ್ತಿರುವುದೇ ಒಂದು ಖುಷಿಯ ವಿಚಾರವಾಗಿದೆ. ದರ್ಶನ್ ನಟಿಸುತ್ತಿರುವುದು ಒಂದು ಹಿಸ್ಟರಿ ಕ್ರಿಯೇಟ್ ಮಾಡುತ್ತದೆ. ದರ್ಶನ್ ನನ್ನ ದತ್ತು ಮಗ ಅಲ್ಲ ನನ್ನ ಸ್ವಂತ ಮಗನೇ. ಐತಿಹಾಸಿಕ ಚಿತ್ರದಲ್ಲಿ ನಾನು ರಾಜಮಾತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದನ್ನೂ ಓದಿ: ಗಂಡುಗಲಿ ಮದಕರಿ ನಾಯಕ ಸಿನಿಮಾ ಮೂಹೂರ್ತದಲ್ಲಿ ಸುಮಲತಾ ಭಾಗಿ
Advertisement
ಇದಕ್ಕೂ ಮೊದಲು ದರ್ಶನ್ ಮಾತನಾಡಿ, ಇಂದು ಸುಮಲತಾ ಅಮ್ಮ ಚಿತ್ರದ ಮುಹೂರ್ತಕ್ಕೆ ಚಾಲನೆ ಕೊಟ್ಟಿದ್ದಾರೆ. ಚಿತ್ರದಲ್ಲಿ ಎಲ್ಲರೂ ಹಿರಿಯ ಕಲಾವಿದರಿದ್ದಾರೆ. ಅವರು ದರ್ಶನ್ ಕೂತ್ಕೋ ಅಂದರೆ ಕುತ್ಕೋಬೇಕು, ನಿಂತ್ಕೋ ಅಂದರೆ ನಿಂತ್ಕೋಬೇಕು. ಯಾಕೆಂದರೆ ಎಲ್ಲರೂ ನನ್ನ ಸಿನಿಯರ್ಸ್ ಎಂದು ಹೇಳಿದರು.
Advertisement
ಚಿತ್ರದಲ್ಲಿರುವ ಬಹಳ ಕಲಾವಿದರು ನಮ್ಮ ತಂದೆ ಜೊತೆಗೆ ಕೆಲಸ ಮಾಡಿದ್ದಾರೆ. ಗಂಡುಗಲಿ ಮದಕರಿ ನಾಯಕನ ಚಿತ್ರಕ್ಕಾಗಿ ದೊಡ್ಡ ಟೀಮ್ ಸೇರಿದ್ದೀವಿ. ಮದಕರಿ ನಾಯಕನ ಪಾತ್ರದಿಂದ ಚಿತ್ರ ಇನ್ನಷ್ಟು ಜನರಿಗೆ ಹತ್ತಿರವಾಗಲಿದೆ. ಅಲ್ಲದೆ ರಾಜಮಾತೆ ಪಾತ್ರದಲ್ಲಿ ಸುಮಲತಾ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗ ಆರಂಭವಾಗಿದೆ, ತಯಾರಿಗಳು ನಡೆಯುತ್ತಿದೆ ಎಂದು ದರ್ಶನ್ ತಿಳಿಸಿದರು. ಇದನ್ನೂ ಓದಿ: ದುರ್ಗದ ಕೋಟೆಯಲ್ಲಿ ‘ವೀರ ಮದಕರಿ ನಾಯಕ’ನಾಗಿ ಸಾರಥಿಯ ಪಯಣ
ದರ್ಶನ್ ಅಭಿನಯದ ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಚಿತ್ರದ ಮಹೂರ್ತ ಇಂದು ನೆರವೇರಿದೆ. ಪುರಾತನ ಗವಿ ಗಂಗಾಧರೆಶ್ವರ ದೇವಸ್ಥಾನದಲ್ಲಿ ಮಹೂರ್ತ ನಡೆದಿದ್ದು, ಚಿತ್ರದ ಮೊದಲ ಸೀನ್ ಗೆ ಚಾಲನೆ ನೀಡಲಾಗಿದೆ. ಮಹೂರ್ತ ಕಾರ್ಯಕ್ರಮದಲ್ಲಿ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಶ್ರೀನಿವಾಸ್ ಮೂರ್ತಿ ಭಾಗಿಯಾಗಿದ್ದಾರೆ.