ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ಸಿನಿಮಾ ಕೆಲಸದಲ್ಲಿ ದರ್ಶನ್ (Darshan) ಬ್ಯುಸಿಯಾಗಿದ್ದಾರೆ. ಹೊಸ ವರ್ಷದ ದಿನವೇ ‘ಡೆವಿಲ್’ (Devil) ಸಿನಿಮಾದ ಡಬ್ಬಿಂಗ್ನಲ್ಲಿ ದರ್ಶನ್ ನಿರತರಾಗಿದ್ದಾರೆ. ಇದನ್ನೂ ಓದಿ: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಕ್ಸಸ್ಗೆ ಶುಭಹಾರೈಸಿದ ಆಮೀರ್ ಖಾನ್
Advertisement
ಸದ್ಯ ಬೇಲ್ ಮೇಲಿರುವ ದರ್ಶನ್ ಅವರು ಬೆನ್ನು ನೋವಿಗೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇದರ ನಡುವೆ ಹೊಸ ವರ್ಷದ ದಿನವೇ ‘ಡೆವಿಲ್’ ಡಬ್ಬಿಂಗ್ ಕಾರ್ಯ ಶುರು ಮಾಡಿದ್ದಾರೆ. ಈ ಹಿಂದೆಯೇ ಅವರು ‘ಡೆವಿಲ್’ ಸಿನಿಮಾದ 50%ರಷ್ಟು ಚಿತ್ರೀಕರಣ ಮುಗಿಸಿದ್ದರು. ಈಗ ಡಬ್ಬಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ.
Advertisement
Advertisement
ದರ್ಶನ್ ಆರೋಗ್ಯದಲ್ಲಿ ಕೊಂಚ ಚೇತರಿಸಿಕೊಂಡ್ಮೇಲೆ ಫೆ.22ರ ಬಳಿಕ ‘ಡೆವಿಲ್’ (Devil) ಸಿನಿಮಾದ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ಈ ಚಿತ್ರವನ್ನು ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ಗೆ ಕುಡ್ಲದ ಕುವರಿ ರಚನಾ ರೈ (Rachana Rai) ನಾಯಕಿಯಾಗಲಿದ್ದಾರೆ.