ಮೈಸೂರು: ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Darshan Arrest) ಅವರನ್ನು ಬೆಂಗಳೂರು ಪೊಲೀಸರು ಮೈಸೂರಿನ ರಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ (The Radisson Blu Plaza Hotel, Mysuru) ಬಂಧಿಸಿದ್ದಾರೆ.
ಇಂದು ಬೆಳಗ್ಗೆ 6.30ಕ್ಕೆ ದರ್ಶನ್ ಹೋಟೆಲ್‌ನಿಂದ ಜಿಮ್‌ಗೆ ವ್ಯಾಯಾಮಕ್ಕೆಂದು ಮೈಸೂರಿನ ಗೋಲ್ಡ್ ಜಿಮ್‌ಗೆ ತೆರಳಿದ್ದರು. ಬೆಳಗ್ಗೆ 8.30ಕ್ಕೆ ಜಿಮ್‌ನಲ್ಲಿ ವ್ಯಾಯಾಮ ಮುಗಿಸಿ ವಾಪಸ್ ಬರುತ್ತಿದ್ದಂತೆಯೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದರ್ಶನ್ ಅಭಿನಯದ ಡೆವಿಲ್ ಸಿನೆಮಾದ ಹೆಸರಿನಲ್ಲಿ ಹೋಟೆಲ್‌ನಲ್ಲಿ ರೂಂ ಬುಕ್ ಆಗಿದೆ. ಜೂನ್ 9ರಿಂದ ದರ್ಶನ್ ಈ ಹೋಟೆಲ್‌ನಲ್ಲಿದ್ದು, ರೂಂನಲ್ಲಿ ಒಬ್ಬರೇ ಉಳಿದುಕೊಂಡಿದ್ದರು. ಇದನ್ನೂ ಓದಿ: ದರ್ಶನ್ ಅರೆಸ್ಟ್ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ರಿಯಾಕ್ಷನ್
ಮೈಸೂರು ಹೋಟೆಲ್ ಮುಂಭಾಗದಲ್ಲಿ ದರ್ಶನ್ ಬಳಸುತ್ತಿದ್ದ ಕೆಎ 01 ಎಂವೈ 7999 ನಂಬರಿನ ರೇಂಜ್ ರೋವರ್ ಡಿಫೆಂಡರ್ ಕಾರು ಈಗಲೂ ನಿಂತಿದೆ. ದರ್ಶನ್ ಅರೆಸ್ಟ್ ಮಾಡಿದ ಬಳಿಕ ಪೊಲೀಸರು ತಮ್ಮ ಕಾರಿನಲ್ಲೇ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮಗನ ಕಳೆದುಕೊಂಡ ಪೋಷಕರ ಆಕ್ರಂದನ- ದರ್ಶನ್‌ಗೆ ಹಿಡಿ ಶಾಪ