ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) 2ನೇ ಆರೋಪಿಯಾಗಿರುವ ನಟ ದರ್ಶನ್ (Darshan Arrested) ಸೇರಿ ನಾಲ್ವರು ಆರೋಪಿಗಳನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ವಹಿಸಿದೆ. ಈ ನಡುವೆ ಕೊಲೆ ಆರೋಪ ಹೊತ್ತಿರುವ ದರ್ಶನ್‌ಗೆ ಐಟಿ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.
Advertisement
ಹೌದು. ಮೊದಲಿಗೆ ರೇಣುಕಾಸ್ವಾಮಿ ಮೃತದೇಹ ವಿಲೇವಾರಿ ಮಾಡುವುದಕ್ಕಾಗಿ ನೀಡಲಾಗಿದ್ದ 30 ಲಕ್ಷ ರೂ. ಹಣವನ್ನು ಪೊಲೀಸರು ತನಿಖೆ ವೇಳೆ ವಶಪಡಿಸಿಕೊಂಡಿದ್ದರು. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಬಳಿಕ ದರ್ಶನ್ ಮನೆಯಲ್ಲಿ ಜೂನ್ 19ರಂದು ಪೊಲೀಸರು 37.40 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆ ಆರೋಪದ ಜತೆಗೆ ದರ್ಶನ್‌ಗೆ ಐಟಿ ಸಂಕಷ್ಟ ಎದುರುಗ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್ ಕಾಪಿಯಲ್ಲಿ ಏನಿದೆ?
Advertisement
Advertisement
ಕಾನೂನು ಪ್ರಕಾರ ಒಬ್ಬ ವ್ಯಕ್ತಿ 2 ಲಕ್ಷ ರೂ. ನಗದು ಮಾತ್ರ ಮನೆಯಲ್ಲಿ ಇಟ್ಟುಕೊಳ್ಳಬಹುದು. ಆದ್ರೆ ತನಿಖೆಯಲ್ಲಿ ಒಟ್ಟು 70 ಲಕ್ಷ ರೂ. ಹಣ ದರ್ಶನ್ ಬಳಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 70 ಲಕ್ಷ ರೂ.ಗಳಿಗೆ ತೆರಿಗೆ ಪಾವತಿ ಮಾಡಲಾಗಿದ್ಯಾ? ಇಷ್ಟೊಂದು ನಗದು ಮೂಲ ಯಾವುದು ಎಂಬುದರ ಕುರಿತು ತನಿಖೆ ನಡೆಸಲು ಪೊಲೀಸರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಲಬುರಗಿ ಹೋಟೆಲ್‌ನಲ್ಲಿ ಸಿಲಿಂಡರ್ ಸ್ಫೋಟ – 11 ಮಂದಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ