ರೇಣುಕಾನನ್ನು ಹೊಡೆಯೋ ದೃಶ್ಯ ಮೊಬೈಲ್‌ನಲ್ಲಿ ರೆಕಾರ್ಡ್ – ದರ್ಶನ್ ಥಳಿಸ್ತಿರೋ 3 ಸೆಕೆಂಡ್ ದೃಶ್ಯ ಡಿಲೀಟ್

Public TV
1 Min Read
Darshan 6

– ಐಫೋನ್ ರಿಟ್ರೀವ್‌ಗಾಗಿ ಪೊಲೀಸರ ಸರ್ಕಸ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಒಂದೊಂದೇ ಸ್ಫೋಟಕ ಸತ್ಯಗಳು ಹೊರ ಬರುತ್ತಿವೆ. ದರ್ಶನ್ (Darshan) ಕರಾಳತೆ ಬಟಾ ಬಯಲಾಗುತ್ತಿದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ವಿಡಿಯೋವನ್ನ ದರ್ಶನ್ ಶಿಷ್ಯರು ರೆಕಾರ್ಡ್ ಮಾಡಿದ್ದಾರೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಹೊಡೆಯುತ್ತಿರುವ ದೃಶ್ಯವನ್ನು ಪ್ರದೂಷ್ ರೆಕಾರ್ಡ್ ಮಾಡಿದ್ದಾನೆ. 3 ಸೆಕೆಂಡ್ ವಿಡಿಯೋದಲ್ಲಿ ದರ್ಶನ್ ಕರಾಳತೆ ಇದೆ ಎನ್ನಲಾಗಿದೆ. ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವಾಗ ಪ್ರದೂಷ್ ತನ್ನ ಐಫೋನ್‌ನಲ್ಲಿ (iPhone)ವಿಡಿಯೋ ಮಾಡಿದ್ದನಂತೆ. ಹಲ್ಲೆ ನಡೆಸೋದನ್ನು ವಿಡಿಯೋ ಮಾಡಿಕೋ ಅಂತ ದರ್ಶನ್ ಹೇಳಿದ್ದರಂತೆ. ಅದರಂತೆ ಪ್ರದೂಷ್ ತನ್ನ ಐಫೋನ್ ತೆಗೆದು ರೆಕಾರ್ಡ್ ಮಾಡಿದ್ದಾನೆ. ಮೂರ್ನಾಲ್ಕು ಸೆಕೆಂಡ್ ಆಗುತ್ತಿದ್ದಂತೆ ಸ್ಟಾಪ್ ಮಾಡಿ ವಿಡಿಯೋ ಡಿಲೀಟ್ ಮಾಡಿದ್ದಾನೆ.

ಈಗ ಪೊಲೀಸರು ಡಿಲೀಟ್ ಆಗಿರುವ ದೃಶ್ಯವನ್ನು ರಿಟ್ರೀವ್‌ಗೆ ಒದ್ದಾಡುತ್ತಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಸಿಐಡಿ ಟೆಕ್ನಿಕಲ್ ಸೆಲ್‌ಗೆ ಐಫೋನ್ ರವಾನಿಸಿದ್ದಾರೆ. ಐಫೋನ್‌ನಿಂದ ವಿಡಿಯೋ ರಿಟ್ರೀವ್ ಮಾಡೋದು ಅಷ್ಟು ಸುಲಭವಲ್ಲ. ಹಾಗಾಗಿ ಹೊಸ ಟೆಕ್ನಾಲಜಿ ಬಳಸಿ ವಿಡಿಯೋ ರಿಟ್ರೀವ್‌ಗೆ ಸಿಐಡಿ (CID) ಮುಂದಾಗಿದೆ. ಒಂದು ವೇಳೆ ವಿಡಿಯೋ ರಿಟ್ರೀವ್ ಆದರೆ ಅದು ಕೇಸ್‌ಗೆ ಮಹತ್ತರ ಸಾಕ್ಷಿಯಾಗೋದು ಸತ್ಯ.

Share This Article