ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮಗ ವಿನೀಶ್‍ಗೆ ಹಸುಹಾಲು ಕರೆಯುವ ಟ್ರೈನಿಂಗ್ ಕೊಡುವುದರಲ್ಲಿ ಫುಲ್ ಬ್ಯುಸಿಯಗಿದ್ದಾರೆ. ಮೈಸೂರಿನ ಫಾರ್ಮ್‍ಹೌಸ್‍ನಲ್ಲಿ ದರ್ಶನ್ ಮತ್ತು ವಿನೀಷ್ ಹಸುಹಾಲು ಕರೆಯುತ್ತಿರುವ ವಿಡಿಯೋವನ್ನು ಅವರ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.
ಮಂಡ್ಯ ಎಲೆಕ್ಷನ್ ಪ್ರಚಾರದಲ್ಲಿ ಸಿಕ್ಕಪಟ್ಟೆ ಬ್ಯುಸಿಯಾಗಿದ್ದ ದಚ್ಚು ಈಗ ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. ಡಿ ಬಾಸ್‍ನ ಹೊಸ ಸಿನಿಮಾ ರಾಬರ್ಟ್ ಸದ್ಯದಲ್ಲೇ ಸೆಟ್ಟೇರಲಿದ್ದು, ಈ ಗ್ಯಾಪ್‍ನಲ್ಲಿ ಮಗನ ಜೊತೆ ದಚ್ಚು ತಮ್ಮ ಸಮಯ ಕಳೆಯುತ್ತಿದ್ದಾರೆ. ಅಪ್ಪನ ರೀತಿಯೇ ಮಗ ವಿನೀಶ್ ಕೂಡ ಪ್ರಾಣಿ ಪ್ರೇಮಿ. ಆದ್ದರಿಂದ ಮಗನಿಗೆ ದರ್ಶನ್ ಹಸುವಿನ ಹಾಲು ಹೇಗೆ ಕರೆಯಬೇಕು ಎನ್ನುವುದನ್ನು ಕಲಿಸುತ್ತಿದ್ದರೆ, ಇತ್ತ ಮಗ ಕೂಡ ಆಸಕ್ತಿಯೊಂದಿಗೆ ತಂದೆಯ ಜೊತೆ ಟ್ರೈನಿಂಗ್ ಪಡೆಯುತ್ತಿದ್ದಾರೆ.
Advertisement
Advertisement
ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಪ್ರಚಾರದ ವೇಳೆ ಅಭಿಮಾನಿ ಚಂದ್ರು ಅವರ ಮನೆಗೆ ದರ್ಶನ್ ಆಗಮಿಸಿದ್ದರು. ಈ ವೇಳೆ ಅಲ್ಲಿದ್ದ ಹಸುವಿನ ಹಾಲು ಕರೆದು ಅಭಿಮಾನಿಗಳ ಮನ ಗೆದ್ದಿದ್ದರು. ದಚ್ಚು ಸ್ವಲ್ಪವು ಮುಜುಗರ ಮಾಡಿಕೊಳ್ಳದೇ ಜನರ ನಡುವೆ ಖುಷಿಯಿಂದ ಹಸುವಿನ ಹಾಲು ಕರೆದು ನಾನು ಯಾವುದರಲ್ಲೂ ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದರು. ಈ ದೃಶ್ಯ ಕೂಡ ಸಖತ್ ವೈರಲ್ ಆಗಿತ್ತು.
Advertisement
Advertisement
ಈ ಹಿಂದೆ ವಿನೀಶ್ ಅವರು ಸಾಕುತ್ತಿರುವ ಕುದುರೆ ಮೇಲೆ ಸವಾರಿ ಮಾಡಿದ ಫೋಟೋ ಸಖತ್ ವೈರಲ್ ಆಗಿತ್ತು. ವಿನೀಶ್ ಕುದುರೆ ಸವಾರಿ ಮಾಡುತ್ತಿದ್ದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿತ್ತು.