ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್‌ಗೆ (Darshan) ಬೇಲ್ ಸಿಕ್ಕ ಬೆನ್ನಲ್ಲೇ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ರಿಯಾಕ್ಷನ್ ಕೊಟ್ಟಿದ್ದಾರೆ. ಕಾಲಾಯ ತಸ್ಮೈ ನಮಃ ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದರ್ಶನ್‌ಗೆ ಬೇಲ್ ಸಿಕ್ಕಿದ್ದಕ್ಕೆ ಮನಸ್ಸು ನಿರಾಳ ಆಗಿದೆ: ತರುಣ್ ಸುಧೀರ್
ದರ್ಶನ್ ಬೇಲ್ ಸಿಕ್ಕಿರುವ ಖುಷಿಯನ್ನು ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಲವೇ ಎಲ್ಲದ್ದಕ್ಕೂ ಉತ್ತರ ಕೊಡಲಿದೆ ಎಂಬರ್ಥದಲ್ಲಿ ಕಾಲಾಯ ತಸ್ಮೈ ನಮಃ ಎಂದು ಅವರು ಹೇಳಿರುವ ತುಣುಕನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನವಗ್ರಹ ಸಿನಿಮಾದ ಟ್ಯೂನ್ ಕೇಳಿ ಬರುತ್ತಿದೆ. ನಟಿಯ ವಿಡಿಯೋ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜೈ ಡಿಬಾಸ್ ಎಂದಿದ್ದಾರೆ.
View this post on Instagram
ಅಂದಹಾಗೆ, ದರ್ಶನ್ ಜೊತೆ ‘ಬುಲ್ ಬುಲ್’ ಸಿನಿಮಾದಲ್ಲಿ ರಚಿತಾ ನಟಿಸಿದ್ದರು. ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ನಟಿ ಪಾದಾರ್ಪಣೆ ಮಾಡಿದರು.