ದರ್ಶನ್‌ಗೆ (Darshan) ಬೇಲ್ (Bail) ಸಿಕ್ಕ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ (Sanjjanaa Galrani) ಸಂತಸ ವ್ಯಕ್ತಪಡಿಸಿದ್ದಾರೆ. ದೀಪಾವಳಿ ಹೊತ್ತಲ್ಲೇ ಅವರು ಹೊರಬರುತ್ತಿದ್ದಾರೆ. ಇದು ದೀಪಾವಳಿ ಗಿಫ್ಟ್ ಎಂದು ಸಂಜನಾ ಗಲ್ರಾನಿ ಖುಷಿಯಿಂದ ಮಾತನಾಡಿದ್ದಾರೆ. ಇದನ್ನೂ ಓದಿ:5 ತಿಂಗಳ ಬಳಿಕ ದರ್ಶನ್ ರಿಲೀಸ್ – ಹೈಕೋರ್ಟ್‌ನಿಂದ 6 ವಾರಗಳ ಜಾಮೀನು ಮಂಜೂರು
ದರ್ಶನ್ ಅವರಿಗೆ ಜಾಮೀನು ಸಿಕ್ಕಿರೋದು ಒಂದು ರೀತಿ ಖುಷಿ ಇದೆ. ಒಂದು ರೀತಿ ದುಃಖ ಇದೆ. ಇಷ್ಟು ಸ್ಟ್ರಿಕ್ಸ್ ಆಗಿ ಕೇವಲ 6 ವಾರಗಳ ಕಾಲ ಜಾಮೀನು ನೀಡಿದ್ದಾರೆ. ಅವರಿಗೆ ಗಂಭೀರವಾಗಿ ಹೆಲ್ತ್ ಸಮಸ್ಯೆ ಇದೆ ಎಂಬುದನ್ನು ನಾವೆಲ್ಲಾ ನೋಡ್ತಾ ಇದ್ವಿ. ಅವರಿಗೆ ಫುಲ್ ಬೇಲ್ ಆಗಬೇಕು ಎಂದು ನಾನು ದೇವರಲ್ಲಿ ಕೇಳಿಕೊಳ್ಳುತ್ತಿದ್ದೆ, ಈಗ ಅವರಿಗೆ ಒಳ್ಳೆಯ ಚಿಕಿತ್ಸೆ ಸಿಗುತ್ತೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ ಸಂಜನಾ ಗಲ್ರಾನಿ.
ದರ್ಶನ್ ಅವರಿಗೆ ಫುಲ್ ಬೇಲ್ ಆಗಬೇಕಿತ್ತು. ಏಕೆಂದರೆ ಅವರೀಗ ಆರೋಪಿಯಷ್ಟೇ ಅಪರಾಧಿ ಅಲ್ಲ. ಪ್ರತಿಯೊಬ್ಬ ಆರೋಪಿ ಬೇಲ್ ಅನ್ನೋದು ಅವರ ಅಧಿಕಾರ, ಅದು ಕಾನೂನು ಪ್ರಕಾರ ಕೂಡ. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ನನಗೆ ಈಗ ಕ್ಲೀನ್ ಚಿಟ್ ಸಿಕ್ಕಿದೆ, ಆ ಸಮಯದಲ್ಲಿ ನನಗೂ ಹೆಲ್ತ್ ಸಮಸ್ಯೆಯಿಂದ ನನಗೆ ಫುಲ್ ಬೇಲ್ ಆಗಿತ್ತು. ಮುಂದೆ ದರ್ಶನ್ ಅವರಿಗೂ ಕ್ಲೀನ್ ಚಿಟ್ ಸಿಗಬೇಕು ಅಂತ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ದರ್ಶನ್ ಪರ ಲಾಯರ್ ಸಿವಿ ನಾಗೇಶ್ ಅವರ ಮೇಲೆ ಗೌರವ ಇದೆ. ಎಲ್ಲಾ ದರ್ಶನ್ ಅಭಿಮಾನಿಗಳು ಅವರಿಗೆ ರೆಸ್ಟ್ ಮಾಡೋಕೆ ಬಿಡಬೇಕು. ದೀಪಾವಳಿ ಹೊತ್ತಲ್ಲಿ ದರ್ಶನ್ ಹೊರಬರುತ್ತಿದ್ದಾರೆ. ನಮಗೂ ಮತ್ತು ದರ್ಶನ್ ಅಭಿಮಾನಿಗಳಿಗೆ ಇದೇ ದೀಪಾವಳಿ ಹಬ್ಬ ಎಂದು ಸಂಜನಾ ಗಲ್ರಾನಿ ಸಂತಸ ವ್ಯಕ್ತಪಡಿಸಿದ್ದಾರೆ.