ದರ್ಶನ್ ಕಾರ್ ಚೇಸ್ ಮಾಡಿದ ಅಭಿಮಾನಿಗೆ ಸಿಕ್ತು ಸರ್ಪ್ರೈಸ್

Public TV
2 Min Read
darshan

ಬೆಂಗಳೂರು: ನೆಚ್ಚಿನ ನಟನನ್ನು ಭೇಟಿ ಮಾಡಲು ಅಭಿಮಾನಿಗಳು ಏನೂ ಬೇಕಾದರೂ ಮಾಡುತ್ತಾರೆ. ಹೀಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಫಾಲೋ ಮಾಡುತ್ತಿದ್ದ ಅಭಿಮಾನಿಗೆ ಸರ್ಪ್ರೈಸ್ ಸಿಕ್ಕಿದೆ.

ದರ್ಶನ್ ಶುಕ್ರವಾರ ತಮ್ಮ ಕಾರಿನಲ್ಲಿ ಹೊರಗೆ ಹೋಗುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಕಪ್ಪು ಗ್ಲಾಸ್‍ನ ಕಾರಿನಲ್ಲಿ ದರ್ಶನ್ ಇದ್ದಾರೆ ಎಂದು ತಿಳಿದಿದೆ. ಹಾಗಾಗಿ ಅಭಿಮಾನಿ ದರ್ಶನ್ ಕಾರನ್ನು ಚೇಸ್ ಮಾಡಿದ್ದಾರೆ. ಅಭಿಮಾನಿ ತಮ್ಮ ಕಾರನ್ನು ಫಾಲೋ ಮಾಡುತ್ತಿರುವುದನ್ನು ಗಮನಿಸಿದ ದರ್ಶನ್, ಕಾರಿನ ಗ್ಲಾಸ್ ಇಳಿಸಿ ಅಭಿಮಾನಿ ಹಾಯ್ ಹೇಳುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ದರ್ಶನ್ ಅಭಿಮಾನಿಗೆ ಹಾಯ್ ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Darshan hospital

ಈ ಹಿಂದೆ ದರ್ಶನ್ ಅವರು ತಮ್ಮ ಲ್ಯಾಂಬೋರ್ಗಿನಿ ಕಾರನ್ನು ಸ್ವತಃ ಡ್ರೈವ್ ಮಾಡಿಕೊಂಡು ಮೈಸೂರಿಗೆ ಹೋಗುತ್ತಿದ್ದರು. ಈ ವೇಳೆ ಅಭಿಮಾನಿ ದರ್ಶನ್ ಕಾರು ಹಿಂದೆ ಹಿಂದೆಯೇ ಫಾಲೋ ಮಾಡಿದ್ದರು. ಆಗ ದರ್ಶನ್ ಕೋಪಗೊಂಡು ಕಾರ್ ನಿಲ್ಲಿಸಿ ಆ ಅಭಿಮಾನಿಗೆ ನನ್ನನ್ನು ಫಾಲೋ ಮಾಡ್ಬೇಡ ಎಂದು ಬೈದು ಬುದ್ಧಿವಾದ ಹೇಳಿದ್ದರು. ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿ ದಯವಿಟ್ಟು ಯಾರು ಈ ರೀತಿ ತೊಂದರೆ ಕೊಡಬೇಡಿ ಎಂದು ವಿನಂತಿಸಿಕೊಂಡಿದ್ದರು. ಇದನ್ನು ಓದಿ: ಫಾಲೋ ಮಾಡ್ಕೊಂಡು ಬಂದ ಅಭಿಮಾನಿಯನ್ನು ಕಾರಿನಿಂದ ಇಳಿದು ಬೈದ ಚಾಲೆಜಿಂಗ್ ಸ್ಟಾರ್! – ವಿಡಿಯೋ

DARSHAN CAR copy

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಖಾಸಗಿ ಕಾರ್ಯಕ್ರಮವೊಂದು ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಅಭಿಮಾನಿ ತಮ್ಮ ನೆಚ್ಚಿನ ನಟನನ್ನು ನೋಡಿ ಸುಮಾರು 6 ಕಿ.ಮೀವರೆಗೂ ಕಾರನ್ನು ಫಾಲೋ ಮಾಡಿದ್ದರು. ತನ್ನ ಕಾರನ್ನು ಅಭಿಮಾನಿ ಫಾಲೋ ಮಾಡುತ್ತಿರುವುದನ್ನು ಗಮನಿಸಿದ ಪುನೀತ್, ತಕ್ಷಣ ಕಾರ್ ನಿಲ್ಲಿಸಿ ಆತನಿಗೆ ಹಿಂದೆಂದೂ ಕಾರು ಫಾಲೋ ಮಾಡದಂತೆ ಸಂದೇಶ ಕೊಟ್ಟಿದ್ದರು. ಪುನೀತ್ ಸರಳತೆ ಹಾಗೂ ಕಾಳಜಿ ಬಗ್ಗೆ ಅಭಿಮಾನಿ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು. ಇದನ್ನು ಓದಿ: 6 ಕಿ.ಮೀ ಫಾಲೋ ಮಾಡಿದ ಅಭಿಮಾನಿಗೆ ಬುದ್ಧಿ ಮಾತು ಹೇಳಿ ಆಸೆ ನೆರವೇರಿಸಿದ್ರು ಪವರ್ ಸ್ಟಾರ್!

puneeth rajkumar fan post

ಹೀಗೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಲು ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳುತ್ತಾರೆ. ಅಭಿಮಾನಿಗಳು ಫಾಲೋ ಮಾಡುವುದನ್ನು ಸ್ಟಾರ್ ನಟರು ಗಮನಿಸಿದರೆ, ಸ್ಥಳದಲ್ಲೇ ಕಾರ್ ನಿಲ್ಲಿಸಿ ಈ ರೀತಿ ಮಾಡದಂತೆ ಬುದ್ಧಿ ಹೇಳುತ್ತಾರೆ. ಅಲ್ಲದೇ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಬೇಡಿ, ಸುರಕ್ಷಿತವಾಗಿರಿ ಎಂದು ಸಂದೇಶ ನೀಡುತ್ತಾರೆ.

https://www.youtube.com/watch?v=rit5REO-7hc

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *