ಬೆಂಗಳೂರು: ಚಾಲೇಜಿಂಗ್ ಸ್ಟಾರ್ ದರ್ಶನ್ ಅವರು ಅಭಿಮಾನಿಯ ಬೈಕಿಗೆ ಆಟೋಗ್ರಾಫ್ ನೀಡಿ ಸಂದೇಶವೊಂದನ್ನು ನೀಡಿದ್ದಾರೆ. ಅವರು ಆಟೋಗ್ರಾಫ್ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದರ್ಶನ್ ಅವರು ಅಭಿಮಾನಿಯೊಬ್ಬರ ಬೈಕಿಗೆ ಆಟೋಗ್ರಾಫ್ ಹಾಕುತ್ತಿರುವ ವಿಡಿಯೋವನ್ನು ಅವರ ಅಭಿಮಾನಿ ಸಂಘದವರು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ದರ್ಶನ್ ಅವರು ಆಟೋಗ್ರಾಫ್ ಹಾಕಿ ಅಭಿಮಾನಿಗೆ ಸಂದೇಶವೊಂದನ್ನು ನೀಡಿದ್ದಾರೆ. ಇದನ್ನೂ ಓದಿ: ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಒಂದು ವಿಶೇಷ ಸಂದೇಶ ನೀಡಿದ ದರ್ಶನ್!
ದರ್ಶನ್ ಆಟೋಗ್ರಾಫ್ ಹಾಕಿದ ಬಳಿಕ ಅಭಿಮಾನಿಗೆ, “ನಿನಗೆ ಒಳ್ಳೆಯದಾಗಲಿ. ನೀನು ಎಲ್ಲೇ ಬೈಕ್ ಓಡಿಸಿದರೂ, ಹುಷಾರಾಗಿ ಓಡಿಸು. ಆದರೆ 60 ಕಿ.ಮೀಗಿಂತ ಜಾಸ್ತಿ ವೇಗವಾಗಿ ಹೋಗಬೇಡ” ಎಂದು ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್ ಮನೆ ಮುಂದೆ ನಿಂತಿವೆ ಸಾಲು ಸಾಲು ಆಟೋಗಳು!
ದರ್ಶನ್ ಈ ಹಿಂದೆ ತಮ್ಮ ಅಭಿಮಾನಿಯ ಆಟೋ, ಜೀಪ್, ಬೈಕ್ ಹಾಗೂ ಆಡಿ ಮೇಲೆ ತಮ್ಮ ಆಟೋಗ್ರಾಫ್ ನೀಡಿದ್ದಾರೆ. ಜೀಪ್ ಮೇಲೆ ಆಟೋಗ್ರಾಫ್ ನೀಡಿ “ಡ್ರೈವ್ ಸೇಫ್” ಎಂದು ಬರೆದು ತಮ್ಮ ಹಸ್ತಕ್ಷರವನ್ನು ಮಾಡಿದ್ದರು.
ಅಭಿಮಾನಿಯ ಬೈಕ್ ಮೇಲೆ ಆಟೋಗ್ರಾಪ್ ಆಕಿ ಶುಭ ಹಾರೈಸಿ "ದಾಸ" ನ ಹಿತವಚನ.. ನೀನು ಎಲ್ಲೆ ಗಾಡಿ ಓಡಿಸು ಆದರೆ 60ಕಿಲೋ ಮೀಟರ್ ಗಿಂತ ಜಾಸ್ತಿ ವೇಗವಾಗಿ ಹೋಗಬಾರದು ????????????@dasadarshan@dinakar219@Dcompany171@DTEAM7999@Raamtheja@DarshanTrends
ರಿಗಾರ್ಡ್ಸ್
ತೂಗುದೀಪ ಗ್ರೂಪ್ಸ್ pic.twitter.com/qjuQ2Ygr6X
— Thoogudeepa Group's – R (@Thoogudeepa_TM) February 17, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv