ಮೈಸೂರು: ಈ ಬಾರಿಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರ ಮೊರೆ ಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.
ಈಗಾಗಲೇ ಸಿದ್ದರಾಮಯ್ಯ ಅವರ ಪರ ನಟಿ ಜಯಮಾಲಾ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಬಾಲಿವುಡ್ ನಟ ರಾಜ್ ಬಬ್ಬರ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪ್ರಚಾರ ಕಣಕ್ಕೆ ಇಳಿಯುತ್ತಿದ್ದರು.
ಆದ್ರೆ ಇದೀಗ ಸಿದ್ದರಾಮಯ್ಯ ಪರ ದರ್ಶನ್ ಪ್ರಚಾರಕ್ಕೆ ವಿರೋಧ ವ್ಯಕ್ತವಾಗಿದ್ದು, ನಾಗನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ದರ್ಶನ್ ಗೆ ಧಿಕ್ಕಾರ ಹಾಕುತ್ತಿದ್ದಾರೆ. ದರ್ಶಶ್ ಸಿದ್ದರಾಮಯ್ಯ ಪರ ಪ್ರಚಾರ ಮಾಡಲು ಗ್ರಾಮಕ್ಕೆ ಆಗಮಿಸದಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಿಎಂಗೆ ಬಿಗ್ ಶಾಕ್ ನೀಡಿದ ನಟ ಕಿಚ್ಚ ಸುದೀಪ್!
ಕಳೆದ 12 ವರ್ಷದಿಂದ ಸಿಎಂ ಸಿದ್ದರಾಮಯ್ಯ ರೈತರ ಪರ ಕೆಲಸ ಮಾಡಿಲ್ಲ. 12 ವರ್ಷ ನಮ್ಮ ಕ್ಷೇತ್ರವನ್ನು ಮರೆತಿದ್ದಾರೆ. ಅಣ್ಣಾ ಅಂಬರೀಶ್ ಅವರನ್ನು ಕಾಂಗ್ರೆಸ್ ನಿಂದ ದೂರ ಮಾಡಿದ್ದಾರೆ. ಹಾಗಾಗಿ ದರ್ಶನ ಯಾವುದೇ ಕಾರಣಕ್ಕೂ ಪ್ರಚಾರ ಮಾಡಬಾರದು ಎಂದು ರೈತ ವಿರೋಧಿ ದರ್ಶನ ಎಂದು ಪ್ರತಿಭಟನಕಾರರು ಕೂಗುತ್ತಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ನಟ ದರ್ಶನ್ ಪ್ರಚಾರವನ್ನು ಕಳಸ್ತವಾಡಿ ಗೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!
ಮೂಲತಃ ದರ್ಶನ್ ಮೈಸೂರಿನವರಾಗಿದ್ದು, ಅವರ ತಾಯಿ ಮೀನಾ ತೂಗುದೀಪ ಅವರು ಕಾಂಗ್ರೆಸ್ ಮುಖಂಡರು. ಹೀಗಾಗಿ ದರ್ಶನ್ ಸಿಎಂ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಕ್ಷೇತ್ರದ ಒಟ್ಟು 33 ಹಳ್ಳಿಗಳಲ್ಲಿ ದರ್ಶನ್ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದಾರೆ.