– ದರ್ಶನ್‌ಗೆ ಅನ್ಯಾಯ ಆಗಿದ್ರೆ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದ ಡಿಸಿಎಂ
ರಾಮನಗರ: ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಭಾಷಣ ಮಾಡುವಾಗ ದರ್ಶನ್ ಅಭಿಮಾನಿಗಳು ‘ಡಿ ಬಾಸ್.. ಡಿ ಬಾಸ್’ ಎಂದು ಘೋಷಣೆ ಕೂಗಿರುವ ಪ್ರಸಂಗ ನಡೆದಿದೆ.
ಕಾರ್ಯಕ್ರಮದಲ್ಲಿ ದರ್ಶನ್ ಕುರಿತು ಮಾತನಾಡಿದ ಡಿಕೆಶಿ, ಅದರ ಬಗ್ಗೆ ನಾಳೆ ಮಾತನಾಡ್ತೀನಿ. ದರ್ಶನ್ (Darshan) ಅವರ ಪತ್ನಿ ಭೇಟಿ ಮಾಡೋಕೆ ಸಮಯ ಕೇಳಿದ್ದಾರೆ. ನಾಳೆ ಬೆಳಗ್ಗೆ ಅವರನ್ನ ಭೇಟಿ ಮಾಡ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು. ಇದನ್ನೂ ಓದಿ: ಜೈಲಲ್ಲಿ ಧ್ಯಾನ, ಅಧ್ಯಾತ್ಮ ಪುಸ್ತಕಗಳ ಓದು – ಅಧ್ಯಾತ್ಮದತ್ತ ದರ್ಶನ್ ಒಲವು?
ಏನಾದರೂ ಅನ್ಯಾಯ ಆಗಿದ್ರೆ ಸರಿಪಡಿಸಲು ಪ್ರಯತ್ನ ಮಾಡ್ತೇನೆ. ಆದರೆ ನಾವು ಕಾನೂನಿಗೆ ಗೌರವ ಕೊಡಬೇಕು. ದೇಶದ ಹಾಗೂ ನೆಲದ ಕಾನೂನು ಪಾಲಿಸಬೇಕು. ಅನ್ಯಾಯ ಯಾರಿಗೇ ಆಗಿದ್ದರೂ ನಾವೆಲ್ಲ ಸೇರಿ ನ್ಯಾಯ ಒದಗಿಸುವ ಕೆಲಸ ಮಾಡೋಣ. ನೊಂದವರೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ ಎಂದು ಆಶಿಸಿದರು.
ಉತ್ಸವ ಕುರಿತು ಮಾತನಾಡಿ, ಅಧಿವೇಶನ ಇದ್ದ ಕಾರಣ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದೇನೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತಕೊಟ್ಟು ಇಕ್ಬಾಲ್ ಗೆಲ್ಲಿಸಿದ್ದೀರಿ. ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ಇರಲಿ. ನಿಮ್ಮ ಸೇವೆ ಮಾಡಲು, ರಾಮನಗರ ಕ್ಷೇತ್ರ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟಿದ್ದೀರಿ. ಡಿಕೆ ಸುರೇಶ್, ಬಾಲಕೃಷ್ಣ, ಇಕ್ಬಾಲ್ ಹುಸೇನ್ ಸೇರಿ ನಾನು ನಿಮ್ಮ ಸೇವೆಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬಜೆಟ್‌ನಲ್ಲಿ ಅನ್ಯಾಯ – ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ ಕರ್ನಾಟಕ