– ಒಡೆಯ ಬ್ಯಾನರ್‌ನಲ್ಲಿ ‘ವೋಟ್ ಫಾರ್ ಕುರಿ’
ಬೆಂಗಳೂರು: ತಮ್ಮ ಕಾಮಿಡಿ ಮೂಲಕ ಜನರ ಮನ ಗೆದ್ದಿರುವ ಕುರಿ ಪ್ರತಾಪ್‍ರನ್ನು ಬಿಗ್ ಬಾಸ್ ಸೀಸನ್-7ರ ಮನೆಯಲ್ಲಿ ಉಳಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹೊಸ ಪ್ಲಾನ್ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್-7ರಲ್ಲಿ ಎಲ್ಲರಿಗೂ ಚಿರಪರಿಚಿತವಾಗಿರುವ ವ್ಯಕ್ತಿ ಅಂದರೆ ಅದು ಕುರಿ ಪ್ರತಾಪ್, ಇನ್ನು ಉಳಿದವರು ಧಾರಾವಾಹಿ ನಟ, ನಟಿಯರು, ಡ್ಯಾನ್ಸರ್ ಇರುವ ಕಾರಣ ಧಾರಾವಾಹಿ ನೋಡದೆ ಇರುವವರಿಗೆ ಅವರ ಪರಿಚಯ ಇರುವುದಿಲ್ಲ. ಕೆಲವೊಂದು ಸಿನಿಮಾಗಳಲ್ಲಿ ಕುರಿ ಪ್ರತಾಪ್ ಅವರ ಕಾಮಿಡಿಯನ್ನು ಜನ ನೋಡಿರುತ್ತಾರೆ. ಇನ್ನು ಮಜಾ ಟಾಕೀಸ್‍ನಲ್ಲಿ ಕುರಿ ಪ್ರತಾಪ್ ಎಲ್ಲರನ್ನು ನಕ್ಕು ನಲಿಸಿದ್ದಾರೆ. ಅದೇ ರೀತಿ ಸದ್ಯ ಬಿಗ್ ಬಾಸ್ ಸೀಸನ್-7ರ ಹಾಸ್ಯ ಪ್ರತಿಭೆಯಾಗಿರುವ ಕುರಿ ಪ್ರತಾಪ್ ಅವರಿಗೆ ಹೆಚ್ಚು ವೋಟ್ ಮಾಡಿ ಎಂದು ಡಿ ಬಾಸ್ ಅಭಿಮಾನಿಗಳು ವಿನೂತನ ರೀತಿ ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ಕುರಿ ಪ್ರತಾಪ್ ತುಂಬಾ ಮುಗ್ಧ. ಅವರು ಅಷ್ಟು ಬೇಗ ಅಗ್ರೆಸ್ಸೀವ್ ಆಗೋಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಬಿಗ್ ಬಾಸ್ ಶೋನಲ್ಲಿ ಎಲ್ಲರನ್ನು ನಕ್ಕು ನಲಿಸಿ, ಮನರಂಜನೆ ನೀಡುತ್ತಿರುವವರ ಸಾಲಿನಲ್ಲಿ ಅವರಿದ್ದಾರೆ. ಮೊದಲ ಮೂರು-ನಾಲ್ಕು ವಾರಗಳಲ್ಲಿ ಕುರಿ ಪ್ರತಾಪ್ ಅವರು ನಾಮಿನೇಷನ್ ಲಿಸ್ಟ್ ಗೆ ಬಂದೇ ಇರಲಿಲ್ಲ. ಇತ್ತೀಚೆಗಷ್ಟೇ ಅವರು ಕೂಡ ನಾಮಿನೇಟ್ ಲಿಸ್ಟ್ ನಲ್ಲಿ ಅವರ ಹೆಸರು ಸೇರಿಕೊಂಡಿದೆ. ಅದರೆ ಜನರು ವೋಟ್ ಮಾಡಿ ಅವರನ್ನು ಸೇವ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಒಳಗೊಂದು ಹೊರಗೊಂದು ಇಟ್ಟುಕೊಳ್ಳದೆ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಕುರಿ ಪ್ರತಾಪ್ ಅವರಲ್ಲಿ ಇದೆ. ಹೀಗಾಗಿ ನಾಮಿನೇಟ್ ಆದರೂ ಅವರು ಸೇವ್ ಆಗುತ್ತಾ ಬಂದಿದ್ದಾರೆ.
Advertisement
Advertisement
ಕುರಿ ಪ್ರತಾಪ್ ಅವರ ಅಭಿಮಾನಿಗಳು ಅವರನ್ನು ಉಳಿಸಲು ಹೆಚ್ಚೆಚ್ಚು ವೋಟ್ ಮಾಡುತ್ತಿದ್ದಾರೆ. ಹಾಗೆಯೇ ಜೊತೆಯಲ್ಲಿರುವವರಿಗೂ ವೋಟ್ ಮಾಡಿ ಎಂದು ಮಾಹಿತಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ದರ್ಶನ್ ಅವರ ಸಿನಿಮಾದ ಬ್ಯಾನರನ್ನೇ ಪ್ರತಾಪ್ ಅವರನ್ನು ಉಳಿಕೊಳ್ಳಲು ಅಭಿಮಾನಿಗಳು ಬಳಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ದರ್ಶನ್ ಅಭಿನಯದ ಭಾರೀ ನಿರೀಕ್ಷಿತ `ಒಡೆಯ’ ಸಿನಿಮಾ ರಿಲೀಸ್ ಆಗಿದೆ. ಈ ವೇಳೆ ದರ್ಶನ್ ಅಭಿಮಾನಿಗಳು ಥಿಯೇಟರ್ ಮುಂದೆ ಡಿ ಬಾಸ್ ಜೊತೆ ಕೆಲ ಅಭಿಮಾಗಳ ಫೋಟೋ ಬ್ಯಾನರ್ ಹಾಕುವುದು ಸಹಜ. ಆದರೆ ಹೀಗೆ ಹಾಕಿದ್ದ ಬ್ಯಾನರ್‌ವೊಂದರಲ್ಲಿ ‘ವೋಟ್ ಫಾರ್ ಕುರಿ’ ಎಂದು ಬರೆದು ಕುರಿ ಪ್ರತಾಪ್ ಫೋಟೋವನ್ನು ಕೂಡ ಹಾಕಲಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೆಟ್ಟಿಗರು ಕುರಿ ಪ್ರತಾಪ್ ಅಭಿಮಾನಿಗಳ ಐಡಿಯಾಗೆ ಫಿದಾ ಆಗಿದ್ದಾರೆ.