ರಾಮನಗರ: ನೂತನ ಆಭರಣ ಮಳಿಗೆ ಉದ್ಘಾಟನೆಗೆ ನಟ ದರ್ಶನ್ ಆಗಮಿಸಿದ ವೇಳೆ ರಸ್ತೆ ತಡೆ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು.
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬಳಿ ನಿರ್ಮಾಣವಾಗಿರುವ ಎಂ.ಎಸ್.ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯನ್ನು ಇಂದು ದರ್ಶನ್ ಉದ್ಘಾಟಿಸಿದರು. ಉದ್ಘಾಟನೆ ಮಾಡಿ ಕಾರಿನಲ್ಲಿ ಹತ್ತಿ ಅಭಿಮಾನಿಗಳಿಗೆ ಕೈಬೀಸಿ ಹೊರಟಿದ್ದಾರೆ. ಈ ವೇಳೆ ದರ್ಶನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಪರಿಣಾಮ ಬೆಂಗಳೂರು- ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು.
Advertisement
Advertisement
ದರ್ಶನ್ ಆಗಮನದ ಹಿನ್ನೆಲೆಯಲ್ಲಿ ಮೈಸೂರಿನಿಂದ ಬರುತ್ತಿರುವ ಮಾರ್ಗದಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ದರ್ಶನ್ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟರು. ಎಷ್ಟು ಮನವಿ ಮಾಡಿದರೂ ಕೇಳದ ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
Advertisement
Advertisement
ಇತ್ತ ದರ್ಶನ್ ಅಭಿಮಾನಿಗಳು ಗಲಾಟೆ ಕೂಡ ಶುರು ಮಾಡಿಕೊಂಡಿದ್ದು, ದರ್ಶನ್ ಬರುವಿಕೆ ಸಿದ್ಧವಾಗಿದ್ದ ವೇದಿಕೆಯ ಮೇಲೆ ಹಾಡುಗಾರರು ತಮಿಳು, ಮಲೆಯಾಳಂ ಮತ್ತು ಹಿಂದಿ ಹಾಡು ಹಾಡುತ್ತಿದ್ದರು. ಇದರಿಂದ ಕೋಪಗೊಂಡ ದರ್ಶನ್ ಅಭಿಮಾನಿಗಳು ದರ್ಶನ್ ಸಾಂಗ್ ಹಾಡುವಂತೆ ನೀರಿನ ಬಾಟಲ್ ಎಸೆದಿದ್ದಾರೆ. ಬಾಟಲ್ ಎಸೆತಕ್ಕೆ ಎಂ.ಎಸ್. ಗೋಲ್ಡ್ ಅಂಡ್ ಡೈಮಂಡ್ಸ್ ಮುಂಭಾಗದ ವಿದ್ಯುತ್ ಕಂಬದಲ್ಲಿನ ಟ್ಯೂಬ್ ಲೈಟ್ ಪುಡಿ ಪುಡಿಯಾಗಿತ್ತು.
ಬೆಂಗಳೂರು ಮೈಸೂರ್ ಹೆದ್ದಾರಿ ಸಂಪೂರ್ಣ ಬಂದ್ ಬಾಸ್ ನೋಡಲು ಮುಗಿಬಿದ್ದ ಜನ ಸಾಗರ ಪೊಲೀಸರಿಂದ ಲಾಠಿ ಚಾರ್ಜ್
ಸಾರ್ವಜನಿಕರಿಗೆ ತೊಂದರೆ ತಪ್ಪಿಸಲು ಬೇಗ ನಿರ್ಗಮಿಸಿದ ಬಾಸ್
Regards-D Legacy@dasadarshan @vijayaananth2 @dinakar219 @publictvnews @suguna_n @FilmibeatKa pic.twitter.com/e0Ga2pmVrh
— Thoogudeepa Dynasty ® (@Darshanfans171) August 15, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv