ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್‍ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy case) ಬಳಿಕ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ವಿಚಾರದಲ್ಲಿ ಇದೀಗ ಪಬ್ಲಿಕ್ ಟಿವಿ ವರದಿ ನಿಜವಾಗಿದೆ.
ದರ್ಶನ್ (Challenging Star Darshan) ಅರೆಸ್ಟ್ ಸುದ್ದಿ ಪ್ರಸಾರ ಮಾಡಿದ್ದ ಮಾಧ್ಯಮಗಳ ಮೇಲೆ ಬೆದರಿಕೆ ಹಾಕಲಾಗಿತ್ತು. ಅಲ್ಲದೇ ದರ್ಶನ್ ವಿರುದ್ಧ ಮಾತನಾಡಿದ್ದ ಉಮಾಪತಿ ಗೌಡ ಹಾಗೂ ಪ್ರಥಮ್ ಗೆ ಅಂದಾಭಿಮಾನಿಗಳು ಬೆದರಿಕೆ ಹಾಕಿದ್ದರು. ಇದೀಗ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಅಶ್ಲೀಲ ಕಮೆಂಟ್, ಬೆದರಿಕೆ ಹಾಕ್ತಿರೋರಿಗೆ ಕಾದಿದೆ ಸಂಕಷ್ಟ ಎಂಬುದಾಗಿ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನೂ ಓದಿ: ಮಂಡ್ಯದಲ್ಲಿ ಜೆಡಿಎಸ್ ಫ್ಲೆಕ್ಸ್‌ಗಳಿಂದ ಹೆಚ್.ಡಿ ರೇವಣ್ಣ ಕಿಕ್ ಔಟ್!
ಇದೀಗ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಂಬತ್ತೂರಿನಿಂದ ದರ್ಶನ್ ಅಂದಾಭಿಮಾನಿ ಚೇತನ್ ನನ್ನು ಪೊಲೀಸರು ಎಳೆದು ತಂದಿದ್ದಾರೆ. ಜೊತೆಗೆ ಮತ್ತೊಬ್ಬ ಅಭಿಮಾನಿ ನಾಗೇಶ್ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೆದರಿಕೆ ಹಾಕಿದ ಅಭಿಮಾನಿಗಳ ಮೇಲೆ ಪಿ ಸಿ ಆರ್ ದಾಖಲು ಮಾಡಲಾಗಿದೆ. ಬಸವೇಶ್ವರ ನಗರ ಠಾಣೆಯಲ್ಲಿ ಕೋರ್ಟ್ ಸೂಚನೆಯಂತೆ ಎಫ್‍ಐಆರ್ ದಾಖಲು ಮಾಡಲಾಗಿದೆ.
ಅರೆಸ್ಟ್ ಆಗ್ತಿದ್ದಂತೆ ಉಮಾಪತಿ ಗೌಡ ಹಾಗೂ ಪ್ರಥಮ್ ಗೆ ಚೇತನ್ ಕ್ಷಮೆ ಕೇಳಿದ್ದಾನೆ. ಕಾನೂನು ಬದ್ಧವಾಗಿ ನಡೆದುಕೊಳ್ತೀನಿ ಕ್ಷಮಿಸಿ ಅಂತಾ ವೀಡಿಯೋ ಮಾಡಿದ್ದು, ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.