ಒಂದು ಕಡೆ ದರ್ಶನ್ (Darshan) ವಿರುದ್ಧ ನಾನಾ ಠಾಣೆಗಳಲ್ಲಿ ದೂರು ದಾಖಲಾಗುತ್ತಿವೆ. ಬೆಂಗಳೂರಿನ ಪುಟ್ಟೇನಹಳ್ಳಿ, ಆರ್.ಆರ್.ಆರ್ ನಗರ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ದೂರು ದಾಖಲಾಗಿವೆ. ಮತ್ತೊಂದು ಕಡೆ ಮಹಿಳೆಯರು ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ಫಿಲ್ಮ್ ಚೇಂಬರ್ ಗೂ ದೂರು ನೀಡಲಾಗಿತ್ತು. ಇಷ್ಟೆಲ್ಲ ದೂರುಗಳು ದಾಖಲಾಗುತ್ತಿದ್ದರೂ, ದರ್ಶನ್ ಮಾತ್ರ ಯಾವುದಕ್ಕೂ ಡೋಂಟ್ ಕೇರ್ ಎನ್ನುತ್ತಿದ್ದಾರೆ.
Advertisement
ಮೊನ್ನೆಯಷ್ಟೇ ದರ್ಶನ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪಾರ್ಟಿಯೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಪತ್ನಿ ವಿಜಯಲಕ್ಷ್ಮಿಯೊಂದಿಗೆ (Vijayalakshmi) ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ ದರ್ಶನ್. ಅವರು ವಿಜಯಲಕ್ಷ್ಮಿ ಜೊತೆ ಕುಣಿಯುತ್ತಿರುವ ವಿಡಿಯೋ ವೈರಲ್ ಕೂಡ ಆಗಿದೆ.
Advertisement
Advertisement
ದರ್ಶನ್ ಅವರ ವಿವಾದದ ಕುರಿತಂತೆ ಸಿನಿಮಾ ರಂಗದ ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬೆಳವಣಿಕೆಯ ಬಗ್ಗೆ ಇಂದ್ರಜಿತ್ ರಿಯಾಕ್ಟ್ ಮಾಡಿದ್ದಾರೆ. ಇಬ್ಬರ ಜಗಳ ಚಿತ್ರರಂಗದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ನಿರ್ದೇಶಕ ಇಂದ್ರಜಿತ್ ಮಾತನಾಡಿದ್ದಾರೆ. ಕಾಟೇರ ಸಿನಿಮಾ ಯಶಸ್ವಿಯಾಗಿದೆ. ಬಹಳಷ್ಟು ವರ್ಷಗಳ ಬಳಿಕ ದರ್ಶನ್‌ಗೆ ಒಂದು ಸಕ್ಸಸ್ ಸಿಕ್ಕಿದೆ. `ಕಾಟೇರ’ ಸಿನಿಮಾ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಈ ಟೈಮ್‌ನಲ್ಲಿ ಈ ರೀತಿ ಮಾಡಿಕೊಳ್ಳಬಾರದಿತ್ತು ಎಂದು ಇಂದ್ರಜಿತ್ ಹೇಳಿದ್ದಾರೆ.
Advertisement
ನನ್ನ ಪ್ರೀತಿಯ ರಾಮು, `ಸಂಗೊಳ್ಳಿ ರಾಯಣ್ಣ’ ಬಳಿಕ ದರ್ಶನ್ ಕಾಟೇರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ಹಿಟ್ ಆಗಿದೆ. ಇಂತಹ ಸಮಯದಲ್ಲಿ ಅವರುಗಳೇ ಕುಳಿತು ಇದನ್ನು ಸರಿಮಾಡಿಕೊಳ್ಳಬೇಕು. ಇದು ಇಂಡ್ರಸ್ಟಿçಗೆ ಶೋಭೆ ತರುವಂತಹ ವಿಚಾರವಲ್ಲ. ಈ ವಿಚಾರದ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಮುಂದೆ ಅದು ಕೆಟ್ಟ ಬೆಳವಣಿಗೆ ಆಗುತ್ತೆ.
ಸೋಷಿಯಲ್ ಮೀಡಿಯಾ ಒಂದು ಅದ್ಬುತ ಜಗತ್ತು. ಆದರೆ ಕೆಲವು ಕಿಡಿಗೇಡಿಗಳು ದುರುಪಯೋಗ ಮಾಡಿಕೊಳ್ತಿದ್ದಾರೆ. ಒಬ್ಬರನ್ನು ತುಳಿಯೋದ್ದಕ್ಕೆ ಬಳಕೆ ಮಾಡ್ತಿದ್ದಾರೆ. ಇದು ಕನ್ನಡ ಇಂಡಸ್ಟಿçಯ ಮೇಲೆ ಕೆಟ್ಟ ಪರಿಣಾಮ ಬಿರುತ್ತೆ. ಮತ್ತೆ ಸಿನಿಮಾಗಳು ಗಡಿ ದಾಟಿ ರೀಚ್ ಆಗಿರೋದ್ದಕ್ಕೆ ಕಾರಣ ಸೋಷಿಯಲ್ ಮೀಡಿಯಾ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳೋಣ ಎಂದು ಇಂದ್ರಜಿತ್ ಮಾತನಾಡಿದ್ದಾರೆ.