ದರ್ಶನ್ (Darshan) ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರೇಣುಕಾಸ್ವಾಮಿ ತಂದೆ, ತಾಯಿಗೆ ಸಮನ್ಸ್ ಜಾರಿ ಮಾಡಿ ಕೋರ್ಟ್ ಆದೇಶ ಮಾಡಿದೆ.
57ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಸಲ್ಲಿಸಿದ ಅರ್ಜಿ ಪುರಸ್ಕರಿಸಲಾಯ್ತು. ಪಿಕ್ ಅಂಡ್ ಚೂಸ್ ಬದಲಿಗೆ ಆರ್ಡರ್ ವೈಸ್ ಸಾಕ್ಷಿದಾರರಿಗೆ ಸಮನ್ಸ್ ನೀಡಬೇಕೆಂಬ ದರ್ಶನ್ ಪರ ವಕೀಲ ಸುನೀಲ್ ಆಕ್ಷೇಪವನ್ನು ಕೋರ್ಟ್ ಪರಿಗಣಿಸಲಿಲ್ಲ. ಡಿ.17ರಂದು ರೇಣುಕಾಸ್ವಾಮಿ ತಂದೆ-ತಾಯಿ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಗೆ 82 ಲಕ್ಷ – ದರ್ಶನ್‌ಗೆ ಬಿಗ್ ಶಾಕ್
ಇನ್ನು, ದರ್ಶನ್ ಗ್ಯಾಂಗ್‌ಗೆ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಟಿವಿ ಅಳವಡಿಸಿ, ಇಲ್ಲವೇ ಟಿವಿ ಇರುವ ಜಾಗಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿ ತೋರಿಸಿ ಎಂದು ಕೋರ್ಟ್ ಆದೇಶಿಸಿದೆ.

