ಬೆಂಗಳೂರು: ಕೋಟಿ ಹೃದಯಗಳನ್ನು ಗೆದ್ದ ಸ್ಯಾಂಡಲ್‍ವುಡ್ ಸಾರಥಿ ಈಗ ಬೇಸರದಲ್ಲಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ದೂರದ ಹೈದರಾಬಾದ್‍ನ ರಾಮೋಜಿರಾವ್ ಸ್ಟುಡಿಯೋದಲ್ಲಿ ಬೀಡು ಬಿಟ್ಟಿದ್ದ ದರ್ಶನ್ ಈಗ ತಾಯಿನಾಡಿಗೆ ವಾಪಸ್ ಬಂದಿದ್ದಾರೆ. ಸದ್ಯ ಮೈಸೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ದರ್ಶನ್ ರಾಮೋಜಿ ಫಿಲಂ ಸಿಟಿಯಂತ ಶೂಟಿಂಗ್ ತಾಣ ಕರ್ನಾಟಕದಲ್ಲಿ ನಿರ್ಮಾಣವಾಗದ್ದಕ್ಕೆ ಬೇಸರಗೊಂಡಿದ್ದಾರೆ.
ರಾಮೋಜಿ ರಾವ್ ಅಂತ ಸುಸರ್ಜಿತ ಶೂಟಿಂಗ್ ಸ್ಪಾಟ್ ಕರ್ನಾಟಕದಲ್ಲಿ ಇಲ್ಲವಲ್ಲ. ಅನಿವಾರ್ಯವಾಗಿ ಇಲ್ಲಿಗೆ ಬಂದು ಶೂಟಿಂಗ್ ಮಾಡಬೇಕಾಯ್ತು ಎಂದು ದರ್ಶನ್ ತನ್ನ ಆಪ್ತರ ಜೊತೆ ಹೇಳಿಕೊಂಡಿದ್ದಾರೆ. ನಮ್ಮಲಿರೋದು ಕೆಲವೇ ಕೆಲವು ಸ್ಟುಡಿಯೋಗಳು. ಅಲ್ಲಿ ದೊಡ್ಡ ದೊಡ್ಡ ಸೆಟ್ ಹಾಕೋದು ಕಷ್ಟ. ಪೌರಾಣಿಕ ಸಿನಿಮಾಗಳು ಮಾಡೋದು ಇನ್ನೂ ಕಷ್ಟ ಎಂದು ದರ್ಶನ್ ಹೇಳಿದ್ದಾರೆ.
- Advertisement 2-
- Advertisement 3-
ಸಿನಿಮಾ ಕೆಲಸಗಳಿಗೆ ಎಂದು ಕೊಟ್ಟಿದ್ದ ಹೆಸರಘಟ್ಟದ 240 ಎಕರೆ ಜಾಗ ಸದುಪಯೋಗ ಆಗದೆ ಇರೋದರ ಬಗ್ಗೆ ದರ್ಶನ್‍ಗೆ ಬೇಸರವಾಗಿದೆ. 2005ರಲ್ಲಿ ಕೊಟ್ಟಿದ್ದ ಈ ಜಾಗ ನಾನಾ ಕಾರಣಗಳಿಂದ ಕನ್ನಡ ಚಿತ್ರರಂಗದ ಕೈ ತಪ್ಪಿತು. ಈಗ ಮೈಸೂರಿನಲ್ಲಿ 100 ಎಕರೆ ಜಾಗದಲ್ಲಿ ಚಿತ್ರನಗರಿ ಶುರುವಾಗಲಿದೆ. ಆದರೆ ಯಾವಾಗ ಕನ್ನಡದ ಚಿತ್ರನಗರಿ ಕೆಲಸ ಆಗುತ್ತೆ ಎನ್ನೋದಕ್ಕೆ ಕಾಲವೇ ಉತ್ತರಿಸಬೇಕು.
- Advertisement 4-
ನಮ್ಮಲ್ಲಿ ಅನುಕೂಲಗಳು ಇದ್ದರೂ ಬೇರೆ ಊರಿನಲ್ಲಿ ಕನ್ನಡ ಸಿನಿಮಾ ನಿರ್ಮಿಸುತ್ತಿದ್ದೇವೆ. ರಾಜ್ಯದಲ್ಲಿ ಕನ್ನಡ ಸಿನಿಮಾ ಕೋಟಿ ರೂ. ವ್ಯವಹಾರ ನಡೆಸುತ್ತಿದ್ದರೂ ಒಂದು ಅತ್ಯುತ್ತಮ ಸ್ಟುಡಿಯೋ ನಿರ್ಮಾಣವಾಗದ ವಿಚಾರ ದರ್ಶನ್ ಅವರನ್ನು ಕಾಡುತ್ತಿದೆ.