ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣ ಸಂಬಂಧ ಇಂದು (ಡಿ.13) ಹೈಕೋರ್ಟ್ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆ ಹ್ಯಾಪಿ ನ್ಯೂಸ್ ಎಂದು ನಟಿ ರಕ್ಷಿತಾ ಪ್ರೇಮ್ (Rakshitha Prem) ಸೋಶಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ.
Advertisement
ಹ್ಯಾಪಿ ನ್ಯೂಸ್, ಹ್ಯಾಪಿ ಡೇ ಎಂದು ದರ್ಶನ್‌ಗೆ (Darshan) ಜಾಮೀನು ಸಿಕ್ಕ ಖುಷಿಯನ್ನು ರಕ್ಷಿತಾ ಪ್ರೇಮ್ ಸಂಭ್ರಮಿಸಿದ್ದಾರೆ.
Advertisement
Advertisement
ಅಂದಹಾಗೆ, ದರ್ಶನ್ ಮತ್ತು ರಕ್ಷಿತಾ ಪ್ರೇಮ್ ಹಲವು ವರ್ಷಗಳಿಂದ ಸ್ನೇಹಿತರು. ದರ್ಶನ್ ಜೊತೆಗೆ ಸುಂಟರಗಾಳಿ, ಕಲಾಸಿಪಾಳ್ಯ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ ಸಂದರ್ಭದಲ್ಲಿ ರಕ್ಷಿತಾ ಜೈಲಿಗೆ ಭೇಟಿ ನೀಡಿ ಧೈರ್ಯ ತುಂಬಿ ಬಂದಿದ್ದರು.