ಬೆಂಗಳೂರು: ದರ್ಶನ್ ಅರೆಸ್ಟ್ (Darshan Arrest) ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಟಿವಿ ನೋಡಲು ಸಮಯ ಸಿಕ್ಕಿಲ್ಲ, ನಾನು ಪೇಪರ್ ಓದಿಲ್ಲ. ಆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಡಿಸಿಎಂ ಡಿಕೆಶಿ (DK Shivakumar) ಹೇಳಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವ ಪರಮೇಶ್ವರ್ ಇದ್ದಾರೆ. ಆ ಬಗ್ಗೆ ಮಾಹಿತಿ ಕೊಡುತ್ತಾರೆ. ಸರ್ಕಾರ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದಷ್ಟೇ ಹೇಳಿದರು. ಇದನ್ನೂ ಓದಿ: ಆರ್.ಅಶೋಕ್‌ಗೆ ನನ್ನ ಮನೆ ಬಿಟ್ಟುಕೊಡ್ತೀನಿ: ಡಿಕೆಶಿ ಟಾಂಗ್
ಇದೇ ವೇಳೆ ವಿ.ಸೋಮಣ್ಣಗೆ ಜಲಶಕ್ತಿ ರಾಜ್ಯ ಖಾತೆ ಮಂತ್ರಿ ಸ್ಥಾನಕ್ಕೆ ತಮಿಳುನಾಡು ಆಕ್ಷೇಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿ.ಸೋಮಣ್ಣ ಸಚಿವರಾದರೆ ಇಡೀ ದೇಶಕ್ಕೆ ಮಂತ್ರಿ. ಅವರು ಬರೀ ಒಂದು ರಾಜ್ಯಕ್ಕೆ ಸೀಮಿತವಲ್ಲ. ರಾಜ್ಯದ ಬಗ್ಗೆ ಹೆಚ್ಚಿನ ಆದ್ಯತೆ ಕೊಡುವುದು ಸಹಜ. ಆದರೆ ಕಾನೂನು ಪ್ರಕಾರ ಮಾಡಿದರೆ ಆಗುತ್ತೆ. ಇಲ್ಲವಾದರೆ ಇಲ್ಲ. ಪ್ರಧಾನ ಮಂತ್ರಿಗಳೂ ಇದ್ದಾರೆ. ಟೀಕೆ ಮಾಡುವುದು ಸರಿಯಲ್ಲ. ನಾವು ಮಂತ್ರಿಯಾದಾಗ ನಮ್ಮ ಕ್ಷೇತ್ರಗಳಿಗೆ ಯೋಜನೆ ಕೊಡುತ್ತಿದ್ದೆವು. ಇನ್ನೂ ಕಣ್ಣೇ ಬಿಟ್ಟಿಲ್ಲ. ಈಗ ಏಕೆ ಟೀಕೆ ಮಾಡುವುದು. ಅವರಿಗೆ ಹೆಚ್ಚಿನ ಶಕ್ತಿ ನೀಡಲಿ. ಎಲ್ಲ ಸಚಿವರು ರಾಜ್ಯದ ಹಿತ ಕಾಪಾಡಲಿ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಲು ಜುಲೈ 31 ಕಡೇ ದಿನ, ಮತ್ತೆ ಅವಧಿ ವಿಸ್ತರಣೆ ಮಾಡಲ್ಲ: ಡಿಕೆಶಿ