ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ಗೆ ಕಾನೂನಿನ ಕುಣಿಗೆ ಮತ್ತಷ್ಟು ಬಿಗಿಯಾದಂತೆ ಕಾಣುತ್ತಿದೆ. ಕೊಲೆ ಪ್ರಕರಣದಲ್ಲಿ ಬಿಗಿಯಾಗಿಯೇ ಲಾಕ್ ಮಾಡಿರುವ ಪೊಲೀಸರು (Bengaluru Police) ಎರಡು ಹಲ್ಲೆ ವೀಡಿಯೋಗಳನ್ನ ಸಂಗ್ರಹ ಮಾಡಿದ್ದಾರೆ. ಇದನ್ನೂ ಓದಿ: ಪತಿಗೆ ದೈಹಿಕ ಸಂಬಂಧ ನಿರಾಕರಿಸುವುದು ಕ್ರೌರ್ಯಕ್ಕೆ ಸಮ: ಮಧ್ಯಪ್ರದೇಶ ಹೈಕೋರ್ಟ್
Advertisement
ಕೃತ್ಯ ಎಸಗಿದ್ದು ಹೇಗೆ?
ಪೊಲೀಸರು ಹೇಳುವಂತೆ ಸಂಗ್ರಹಿಸಲಾದ ಎರಡು ವೀಡಿಯೋಗಳಲ್ಲಿ, `ಡಿ’ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿರುವುದು ಕಂಡುಬಂದಿದೆ ಎನ್ನಲಾಗಿದೆ.
Advertisement
ಅಪಹರಣದ ಬಳಿಕ ರೇಣುಕಾಸ್ವಾಮಿಯನ್ನ ಶೆಡ್‌ಗೆ ಕರೆದೊಯ್ಯಲಾಗಿದೆ. ಈ ವೇಳೆ `ಡಿ’ಗ್ಯಾಂಗ್ (D Gang) ಮನಸೋ ಇಚ್ಚೆ ಹಲ್ಲೆ ನಡೆಸಿದೆ. ಕಬ್ಬಿಣದ ರಾಡ್, ಲಾಠಿ ಹಾಗೂ ಬೆಲ್ಟ್‌ನಿಂದ ಹಲ್ಲೆ ನಡೆಸಿದೆ ಗ್ಯಾಂಗ್. ಹಲ್ಲೆ ನಡೆಸುವಾಗ ಆರೋಪಿಯೊಬ್ಬ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾನೆ. ಈ ವಿಡಿಯೋ ಸಹ ಪೊಲೀಸರಿಗೆ ಲಭ್ಯವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪೊದೆಯೊಂದರಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಅತ್ಯಾಚಾರ ಶಂಕೆ
Advertisement
Advertisement
ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸುವ ಮೊಬೈಲ್ ವೀಡಿಯೊ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಸಿಸಿಟಿವಿ ಡಿವಿಆರ್ (CCTV DVR) ಸೀಜ್ ಮಾಡಿದ್ದು, ಚಿತ್ರೀಕರಣ ಮಾಡಿದ್ದ ಮೊಬೈಲ್‌ಗಳನ್ನೂ ಸಹ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಿಕ್ನಿಕ್‍ಗೆ ತೆರಳಿದ್ದಾಗ ಅವಘಡ – ಮುಳುಗುತ್ತಿದ್ದವನ ರಕ್ಷಿಸಲು ಹೋಗಿ ನಾಲ್ವರು ದುರ್ಮರಣ