ನಟ ದರ್ಶನ್ (Darshan) ನಿವಾಸದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದೀಗ ಸಂಕ್ರಾಂತಿಯಂದು (Sankranti Festival) ಪತಿ ಜೊತೆಗಿನ ಫೋಟೋವನ್ನು ಪತ್ನಿ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಎಲ್ಲಾ ಹೀರೋಗೂ ಒಂದು ಟೈಮ್‌ಲೈನ್ ಇರುತ್ತದೆ: ರಿಟೈರ್‌ಮೆಂಟ್ ಬಗ್ಗೆ ಸುದೀಪ್ ಮಾತು
ಹಬ್ಬದ ದಿನದಂದು ಪತ್ನಿ ಜೊತೆ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಕಾಲ ಕಳೆಯುತ್ತಿದ್ದಾರೆ. ಪತಿ ಜೊತೆ ಸಾಕು ಪ್ರಾಣಿಗಳನ್ನು ನೋಡುತ್ತಿರುವ ಹಿಂಭಾಗ ಫೋಟೋವನ್ನು ಶೇರ್ ಮಾಡಿ ವಿಜಯಲಕ್ಷ್ಮಿ ಖುಷಿಪಟ್ಟಿದ್ದಾರೆ.
ಇನ್ನೂ ದರ್ಶನ್‌ಗೆ ಕೊಲೆ ಪ್ರಕರಣದಲ್ಲಿ ರೆಗ್ಯೂಲರ್ ಬೇಲ್ ಸಿಕ್ಕಿರುವ ಹಿನ್ನೆಲೆ ಇತ್ತೀಚಿಗೆ ವಿಜಯಲಕ್ಷ್ಮಿ ಖುಷಿ ಆಗಿರೋ ಫೋಟೋಗಳನ್ನ ಶೇರ್ ಮಾಡುತ್ತಿದ್ದಾರೆ. ಇದು ದರ್ಶನ್ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.