ದುಬೈನಲ್ಲಿ ಅದ್ಧೂರಿಯಾಗಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ದರ್ಶನ್ ದಂಪತಿ

Public TV
1 Min Read
darshan 1 6

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಮತ್ತು ವಿಜಯ್‌ಲಕ್ಷ್ಮಿ (Vijaylakshmi) ಅದ್ಧೂರಿಯಾಗಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. 21ನೇ ಮದುವೆ ಆ್ಯನಿವರ್ಸರಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

darshan 1 5

ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಮದುವೆಯಾಗಿ 20 ವರ್ಷಗಳು ಕಳೆದಿವೆ. ಇದೀಗ 21ನೇ ವರ್ಷದ ಮ್ಯಾರೇಜ್ ಆ್ಯನಿವರ್ಸರಿ (Wedding Anniversary) ಸಂಭ್ರಮದಲ್ಲಿದ್ದಾರೆ. ದುಬೈನಲ್ಲಿ (Dubai) ಕಲರ್‌ಫುಲ್ ಆಗಿ ಕಾರ್ಯಕ್ರಮ ಆಯೋಜಿಸಿ ಖುಷಿಪಟ್ಟಿದ್ದಾರೆ. ಈ ಸಂಭ್ರಮದಲ್ಲಿ ಅಭಿಮಾನಿಗಳು ಕೂಡ ಭಾಗಿಯಾಗಿದ್ದಾರೆ.

2003ನೇ ಇಸವಿಯಲ್ಲಿ ಮೇ 19ರಂದು ದರ್ಶನ್ ಮತ್ತು ವಿಜಯಲಕ್ಷ್ಮಿ ಜೋಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ಮದುವೆ ಜರುಗಿತು. ಇದೀಗ ಈ ದಂಪತಿಗೆ ವಿನೀಶ್ ಎಂಬ ಪುತ್ರನಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ರಿಲೀಸ್ ಡೇಟ್ ಫಿಕ್ಸ್

ಇದೀಗ ಕೈತುಂಬಾ ಸಿನಿಮಾ ಕಮೀಟ್‌ಮೆಂಟ್‌ಗಳ ನಡುವೆ ಪತ್ನಿ ಜೊತೆ ದರ್ಶನ್‌ಗೆ ದುಬೈಗೆ ಹಾರಿದ್ದು, ಇ ವರ್ಷ ಮದುವೆಯಾದ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ.

ಸದ್ಯ ದರ್ಶನ್ ‘ಡೆವಿಲ್’ (Devil Film) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿಯಾಗಿ ಕರಾವಳಿ ಬೆಡಗಿ ರಚನಾ ರೈ (Rachana Rai) ಕಾಣಿಸಿಕೊಳ್ಳಲಿದ್ದಾರೆ.

Share This Article