ಸ್ಯಾಂಡಲ್‌ವುಡ್ ನಟಿ ರಕ್ಷಿತಾ ಸಹೋದರ ರಾಣಾ (Raana) ಮದುವೆ ಫೆ.7ರಂದು ಅದ್ಧೂರಿಯಾಗಿ ಜರುಗಿದೆ. ಇಂದು (ಫೆ.8) ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಸಂಭ್ರಮದಲ್ಲಿ ದರ್ಶನ್ (Darshan) ಭಾಗಿಯಾಗಿ ಹೊಸ ಜೋಡಿಗೆ ಶುಭಕೋರಿದ್ದಾರೆ.
ಕೊಲೆ ಪ್ರಕರಣದಲ್ಲಿ ಬೇಲ್ ಸಿಕ್ಕ ಬಳಿಕ ಮೊದಲ ಬಾರಿಗೆ ಶುಭಕಾರ್ಯದಲ್ಲಿ ದರ್ಶನ್ ಹಾಜರಿ ಹಾಕಿದ್ದಾರೆ. ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗುದೀಪ ಜೊತೆ ದರ್ಶನ್ ಆಗಮಿಸಿದ್ದಾರೆ. ಪ್ರೇಮ್ ಹೆಗಲ ಮೇಲೆ ಕೈಹಾಕಿಕೊಂಡು ದರ್ಶನ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟಿರುವ ರಾಣಾಗೆ ದರ್ಶನ್ ವಿಶ್ ಮಾಡಿದ್ದಾರೆ.
ಗೆಳತಿ ರಕ್ಷಿತಾಗೆ (Rakshitha Prem) ಕೊಟ್ಟ ಮಾತಿನಂತೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ದರ್ಶನ್ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಜಯಮಾಲಾ ಪುತ್ರಿಯ ಅದ್ಧೂರಿ ಆರತಕ್ಷತೆ: ಸಿನಿ ತಾರೆಯರ ದಂಡು
ಇನ್ನೂ ರಾಣಾ ದಂಪತಿಯ ಆರತಕ್ಷತೆಯಲ್ಲಿ ರಾಧಿಕಾ ಕುಮಾರಸ್ವಾಮಿ, ಧ್ರುವ ಸರ್ಜಾ, ಅಮೂಲ್ಯ ದಂಪತಿ, ತರುಣ್ ಸುಧೀರ್ ಸೇರಿದಂತೆ ಅನೇಕರು ಭಾಗಿಯಾಗಿ ವಿಶ್ ಮಾಡಿದ್ದಾರೆ.