– ದರ್ಶನ್ ಕಾಲಿನಲ್ಲಿ ವೀಕ್ನೆಸ್, ಎಡಗಾಲು ಸ್ಪರ್ಶತೆ ಕಡಿಮೆ
– ಎಂಆರ್‌ಐ, ಸ್ಕ್ಯಾನಿಂಗ್, ಎಕ್ಸ್‌ರೇಗೆ ಸಲಹೆ
ಬೆಂಗಳೂರು: ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್ (Darshan) ಶುಕ್ರವಾರ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ದರ್ಶನ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ನವೀನ್ ಅಪ್ಪಾಜಿ ಗೌಡ ಮಾತನಾಡಿ, ಇಂದು ಮಧ್ಯಾಹ್ನ 3:30 ಕ್ಕೆ ದರ್ಶನ್ ಅಡ್ಮಿಟ್ ಆದರು. ದರ್ಶನ್ ಕಾಲಲ್ಲಿ ವೀಕ್ನೆಸ್ ಇದೆ. ಎಡಗಡೆಯ ಕಾಲು ನೋವಿದೆ. ಎಂಆರ್‌ಐ, ಸ್ಕ್ಯಾನಿಂಗ್, ಎಕ್ಸ್ ರೇ ಮಾಡಬೇಕಾಗುತ್ತೆ. ಎಡಗಡೆಯ ಕಾಲು ತುಂಬಾ ನೋವಿದೆ. ಬೆನ್ನುನೋವಿಗೆ ಸಂಬಂಧಿಸದಂತೆ ಪರೀಕ್ಷೆ ಮಾಡಬೇಕಾಗುತ್ತೆ. 48 ಗಂಟೆ ಬಳಿಕ ಒಟ್ಟಾರೆ ರಿಪೋರ್ಟ್ ಸಿಗಲಿದೆ. ತಪಾಸಣೆಗೆ 24 ಗಂಟೆಗಳ ಕಾಲಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ
ಎಡಗಾಲು ಸ್ಪರ್ಶತೆ ಸ್ವಲ್ಪ ಕಡಿಮೆ ಆಗಿದೆ. ಎಕ್ಸಾಮಿನೇಷನ್ ಮುಗಿದ ಬಳಿಕ ಅಪರೇಷನ್ ಅಥವಾ ಫಿಸಿಯೋನಾ? ಅಥವಾ ಬೇರೆ ರೀತಿಯ ಚಿಕಿತ್ಸೆನಾ ಅಂತ ತಿಳಿಯಲಿದೆ. ಸದ್ಯಕ್ಕೆ ನೋವು ನಿವಾರಕ ನೀಡಲಾಗಿದೆ. ಎಕ್ಸಾಮಿನೇಷನ್ ರಿಪೋರ್ಟ್ ಬಳಿಕ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ನಟ ದರ್ಶನ್‌ಗೆ ಬೆನ್ನುನೋವು, ಎಡಗಾಲು ನೋವು ಸಮಸ್ಯೆ ಹಾಗೂ ಎಡಗಾಲು ಸ್ಪರ್ಶತೆ ಕಡಿಮೆ ಇರೋದು ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಎಡಗಾಲು ನೋವಿಗೆ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಮೂರು ಪರೀಕ್ಷೆ ಮಾಡಿ ಬೆನ್ನು ನೋವಿಗೆ ಏನು ಚಿಕಿತ್ಸೆ ಕೊಡಬೇಕು ಎಂದು ವೈದ್ಯರು ನಿರ್ಧರಿಸಲಿದ್ದಾರೆ. ಇದನ್ನೂ ಓದಿ: ಬಿಜಿಎಸ್ ಆಸ್ಪತ್ರೆಯಲ್ಲಿಂದು ದರ್ಶನ್‌ಗೆ ವೈದ್ಯಕೀಯ ಪರೀಕ್ಷೆ