ಮೈಸೂರು: ಇಂದು ಮುಂಜಾನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರ್ ಅಪಘಾತಕ್ಕೀಡಾಗಿದ್ದು, ದರ್ಶನ್ ಕಾರ್ ಅಪಘಾತ ನಡೆದ ಸ್ಥಳದ ಫೋಟೋ ಮಾಧ್ಯಮಗಳಿಗೆ ಲಭ್ಯವಾಗಿದೆ.
ಮೈಸೂರಿನ ಕ್ರಾಫ್ಟ್ ಬಜಾರ್ ಎದುರುಗಡೆ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಡಿವೈಡರ್ ಮೇಲಿದ್ದ ಲೈಟ್ ಕಂಬ ನೆಲಕ್ಕಪ್ಪಳಿಸಿದೆ.
ಹಿನಕಲ್ ನ ಔಟರ್ ರಿಂಗ್ ರಸ್ತೆಯಲ್ಲಿ ತಿರುವು ಇದ್ದು, ಕಾರ್ ವೇಗವಾಗಿ ಬಂದು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದಿದ್ದು, ಕಾರಿನ ಗಾಜು ಪುಡಿಪುಡಿಯಾಗಿ ರಸ್ತೆಯಲ್ಲಿ ಬಿದ್ದಿದೆ. ಅಷ್ಟೇ ಅಲ್ಲದೇ ಕಾರ್ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ.
ಅಪಘಾತ ನಡೆದ ದರ್ಶನ್ ಕಾರು ನಾಪತ್ತೆಯಾಗಿತ್ತು, ಆದ್ರೆ ಇದೀಗ ಅಪಘಾತವಾದ ಕಾರ್ ಪತ್ತೆಯಾಗಿದೆ. ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆದಿದ್ದರಿಂದ ಕಾರಿನ ಮುಂದೆ ಎಡಭಾಗ ಸಂಪೂರ್ಣ ಸಜ್ಜು ಗುಜ್ಜಾಗಿದೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಡಾ.ಅಜಯ್ ಹೆಗ್ಡೆ ಮತ್ತು ಡಾ, ಶಣೈ ಅವರು ದರ್ಶನ್ ಅವರಿಗೆ ಚಿಕಿತ್ಸೆ ನೀಡಿದ್ದು, ಬಲಗೈನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ದರ್ಶನ್ ಬಲಗೈನ 2 ಮೂಳೆ ಮುರಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಪ್ರಜ್ವಲ್ ಮತ್ತು ದೇವರಾಜ್ ಅವರಿಗೂ ಚಿಕಿತ್ಸೆ ಮುಗಿದಿದೆ. ಅಪಘಾತದಲ್ಲಿ ಕಡಗ ಸಂಪೂರ್ಣವಾಗಿ ದರ್ಶನ್ ಕೈಗೆ ಚುಚ್ಚಿದೆ. ಆದ್ದರಿಂದ ಅದನ್ನು ಕಟ್ ಮಾಡಿ ಚಿಕಿತ್ಸೆ ನೀಡಲಾಗಿದೆ. ಇಂದು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಬಳಿಕ 2-3 ವಾರ ವಿಶ್ರಾಂತಿ ಪಡೆಯಬೇಕು. ಈಗಾಗಲೇ ದರ್ಶನ್ ಪತ್ನಿ, ತಾಯಿ, ಮಗ ಮತ್ತು ಸೃಜನ್ ಲೋಕೇಶ್ ಬಂದಿದ್ದಾರೆ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಅವರು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=l3g9Cg7z2T0
https://www.youtube.com/watch?v=5cZhEqTdypo