ತೆರೆಮೇಲೆ ಬಿಗ್‌ಸ್ಟಾರ್ ಚಿತ್ರಗಳು ಪೈಪೋಟಿಗೆ ಇಳಿದ್ರೆ ಅಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೆ ಇಂಥದ್ದೇ ಒಂದು ತೆರೆಮೇಲೆ ಕಾದಾಟ ನಡೆಯುವ ಸೂಚನೆ ಈಗ ಸಿಕ್ಕಿದೆ. ಯಾಕಂದ್ರೆ ಮುಂಬರುವ ಸಂಕ್ರಾಂತಿ ಹಬ್ಬವನ್ನ ಟಾರ್ಗೆಟ್ ಮಾಡಿಕೊಂಡ ಎರಡು ಬಿಗ್ ಚಿತ್ರಗಳು ಇದೀಗ ತೆರೆಯ ಮೇಲೆ ಭರ್ಜರಿ ಕಾದಾಟಕ್ಕೆ ಸಿದ್ಧವಾಗಿದೆ. ಆ ಮೂಲಕ ಇಬ್ಬರು ಸ್ಟಾರ್‌ಗಳು ಎದುರಾಳಿಯಾಗಿ ನಿಲ್ಲಲು ಹೊರಟಿದ್ದಾರೆ. ಅವರೇ ದಳಪತಿ ವಿಜಯ್ (Thalapathy Vijay) ಹಾಗೂ ಡಾರ್ಲಿಂಗ್ ಪ್ರಭಾಸ್ (Prabhas). ದಕ್ಷಿಣ ಭಾರತದ ಈ ಸೂಪರ್‌ಸ್ಟಾರ್‌ಗಳು ಇದೀಗ ಸ್ಕ್ರೀನ್‌ವಾರ್‌ಗೆ ಕಹಳೆ ಮೊಳಗಿಸಿದ್ದಾರೆ.
ಈಗಾಗಲೇ ದಳಪತಿ ವಿಜಯ್ ಕೊನೆಯ ಚಿತ್ರ ಎನ್ನಲಾಗುತ್ತಿರುವ `ಜನನಾಯಕನ್’ ಸಿನಿಮಾ 2026ರ ಜನವರಿ 9ಕ್ಕೆ ರಿಲೀಸ್ ಆಗಲು ಘೋಷಣೆಯಾಗಿದೆ. ಅದರ ತಯಾರಿಯೂ ನಡೆದಿದೆ. ಇದೀಗ ಜನನಾಯಕನ್ ಚಿತ್ರಕ್ಕೆ ಎದುರಾಳಿಯಾಗಿ ಅಖಾಡಕ್ಕಿಳಿಯಲು ಪ್ರಭಾಸ್ ನಟನೆಯ ಚಿತ್ರ ಸಿದ್ಧವಾಗಿದೆ. ಆಶ್ಚರ್ಯಕರ ರೀತಿಯಲ್ಲಿ ಜನವರಿ 9ನ್ನೇ ಆಯ್ಕೆ ಮಾಡಿಕೊಂಡಿದೆ. ಆ ಚಿತ್ರವೇ ರಾಜಾಸಾಬ್.ಇದನ್ನೂ ಓದಿ: ಯಜಮಾನ ಚಿತ್ರಕ್ಕೆ ಆಧುನಿಕ ತಂತ್ರಜ್ಞಾನ ಸ್ಪರ್ಶ: 25 ವರ್ಷಗಳ ನಂತರ ರಿ-ರಿಲೀಸ್
ಜನನಾಯಕನ್ ಹಾಗೂ ರಾಜಾಸಾಬ್ ಇವೆರೆಡೂ ಪ್ಯಾನ್ ಇಂಡಿಯಾ ಚಿತ್ರಗಳು. ಜೊತೆಗೆ ಬಿಗ್‌ಸ್ಟಾರ್ ಚಿತ್ರಗಳು. ಆದರೆ ಮೂಲ ಬೇರೆ ಬೇರೆ ಭಾಷೆಯದ್ದಾದ್ರೂ ಬಿಗ್‌ಸ್ಟಾರ್‌ವಾರ್ ಫಿಕ್ಸೇ. ಒಂದು ಬಿಗ್ ಚಿತ್ರಕ್ಕೆ ಇನ್ನೊಂದು ಬಿಗ್‌ಸ್ಟಾರ್ ಚಿತ್ರ ಎದುರಾಳಿಯಾಗಿ ನಿಂತರೆ ಒಂದಕ್ಕೆ ಸೋಲು ಇನ್ನೊಂದಕ್ಕೆ ಗೆಲುವು ಆಗುವ ಸಾಧ್ಯತೆಗಳೇ ಹೆಚ್ಚು. ಇಬ್ಬರಿಗೂ ಬೇರೆ ಬೇರೆಯದ್ದೇ ಆದ ಫ್ಯಾನ್ಸ್ ಬಳಗವೂ ಇದೆ. ಆದರೂ ತೆರೆಯಲ್ಲಿ ಒಂದೇ ದಿನ ಎದುರಾಳಿಯಾದ್ರೆ ಬಾಕ್ಸಾಫೀಸ್‌ನಲ್ಲೂ ಶೇರ್ ಮಾಡಿಕೊಳ್ಳಬೇಕಾಗುತ್ತೆ.
ಒಟ್ನಲ್ಲಿ ಇದೀಗ ಆಶ್ಚರ್ಯಕರ ರೀತಿಯಲ್ಲಿ ಪ್ರಭಾಸ್ ರಾಜಾಸಾಬ್ ಘೋಷಣೆಯಾಗಿದೆ. ಸಂಕ್ರಾಂತಿ ಹಬ್ಬದ ಸಂದರ್ಭ ಆಗಿರೋದ್ರಿಂದ ಜನವರಿ 9 ಇವೆರಡೂ ಚಿತ್ರಗಳ ಟಾರ್ಗೆಟ್ ಆಗಿದೆ. ಆದರೆ ಮುಂದೇನಾದ್ರೂ ಬದಲಾವಣೆ ಆಗುತ್ತಾ ಅಥವಾ ಇವೆರಡೂ ಚಿತ್ರಗಳ ನಿರ್ಮಾಪಕರು ತಮ್ಮ ನಿರ್ಧಾರಕ್ಕೆ ಅಂಟಿಕೊಳ್ಳುತ್ತಾರಾ ಕಾದು ನೋಡಬೇಕು.ಇದನ್ನೂ ಓದಿ: ಹೊಸ ಸಿನಿಮಾ ಘೋಷಿಸಿದ ಭೈರಾದೇವಿ ನಿರ್ದೇಶಕ ಶ್ರೀಜೈ



