ದೀಪಿಕ್ ಅರಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರದ ಟ್ರೈಲರ್ (Trailer) ಸಿದ್ಧವಾಗಿದ್ದು, ಸೆಪ್ಟೆಂಬರ್ 28ರಂದು ರಿಲೀಸ್ ಮಾಡುವುದಾಗಿ ನಿರ್ದೇಶಕರು ಹೇಳಿದ್ದಾರೆ. ಸಿನಿಮಾದ ಒಂದಷ್ಟು ಅಂಶಗಳನ್ನು ಅವರು ಈ ಟ್ರೈಲರ್ ಮೂಲಕ ಹೇಳಲು ಹೊರಟಿದ್ದಾರಂತೆ.
ಈ ಹಿಂದೆ ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ (Darling Krishna) ಅವರ ಹುಟ್ಟು ಹಬ್ಬಕ್ಕಾಗಿ ‘ಶುಗರ್ ಫ್ಯಾಕ್ಟರಿ’ (Sugar Factory) ಚಿತ್ರತಂಡ ವಿಶೇಷ ಪೋಸ್ಟರ್ ಒಂದನ್ನು ರಿಲೀಸ್ ಮಾಡಿತ್ತು. ಈ ಮೂಲಕ ತನ್ನ ಚಿತ್ರದ ನಾಯಕನಿಗೆ ಚಿತ್ರತಂಡ ಶುಭಾಶಯ ತಿಳಿಸಿತ್ತು. ಆ ಫೋಸ್ಟರ್ ಕೃಷ್ಣ ಅಭಿಮಾನಿಗಳಿಗೆ ಸಂಭ್ರಮ ತಂದಿತ್ತು.
ನಿರ್ದೇಶಕ ದೀಪಕ್ ಅರಸ್ (Deepak) ನಟಿ ಅಮೂಲ್ಯ ಅವರ ಸಹೋದರ. ಈ ಹಿಂದೆ ಅಮೂಲ್ಯ, ರಾಕೇಶ್ ಅಡಿಗ ಜೋಡಿಯ ಮನಸಾಲಜಿ ಚಿತ್ರ ನಿರ್ದೇಶಿಸಿದ್ದರು, ಇದೀಗ ಎರಡನೇ ಸಿನಿಮಾವಾಗಿ ಶುಗರ್ ಫ್ಯಾಕ್ಟರಿ ಚಿತ್ರ ಮೂಡಿ ಬಂದಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನ ದೀಪಕ್ ಅರಸ್ ಅವರೇ ಬರೆದಿದ್ದಾರೆ. ಇದನ್ನೂ ಓದಿ:ನ.24ಕ್ಕೆ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ಸ್ಟಾರ್ ಕಲಾವಿದರ ಸಾಥ್
ಫನ್ ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅದ್ವಿತಿ ಶೆಟ್ಟಿ, ಸೊನಾಲ್ ಮೊಂಥೆರೋ, ಶಿಲ್ಪಾ ಶೆಟ್ಟಿ ಶುಗರ್ ಫ್ಯಾಕ್ಟರಿ ನಟಿಮಣಿಯರಾಗಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಅರಸು ಅಂತಾರೆ, ಚಂದನ್ ಶೆಟ್ಟಿ ಸಾಹಿತ್ಯ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣದಲ್ಲಿ ಶುಗರ್ ಫ್ಯಾಕ್ಟರಿ ಚಿತ್ರ ಸೆರೆಯಾಗಿದೆ.
ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಗಿರೀಶ್ ಶುಗರ್ ಫ್ಯಾಕ್ಟರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೈಸೂರು, ಗೋವಾ ಹಾಗೂ ವಿದೇಶಗಳಲ್ಲೂ ಸಿನಿಮಾ ಸೆರೆ ಹಿಡಿಯಲಾಗಿದೆ. ರಂಗಾಯಣ ರಘು, ಗೋವಿಂದೇ ಗೌಡ, ಸೂರಜ್ ಕುಮಾರ್, ಮಹಂತೇಶ್, ಪವನ್ ಎಸ್ ನಾರಾಯಣ್, ರಾಯಲ್ ರವಿ, ಅವೀಕ್ಷ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಬಳಗದಲ್ಲಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]