ಸ್ಯಾಂಡಲ್‌ವುಡ್ ನಟ ಡಾರ್ಲಿಂಗ್ ಕೃಷ್ಣ (Darling Krishna) ‘ಹಲಗಲಿ’ ಸಿನಿಮಾದಿಂದ ಹೊರಬಂದ ಬೆನ್ನಲ್ಲೇ ಮುಂದಿನ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೊಮ್ಮೆ ಡೈರೆಕ್ಟರ್ ಶಶಾಂಕ್ (Director Shashank) ಜೊತೆ ಸಿನಿಮಾ ಮಾಡಲು ಕೃಷ್ಣ ಕೈಜೋಡಿಸಿದ್ದಾರೆ.
ಇತ್ತೀಚೆಗೆ ತೆರೆಕಂಡ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ಶಶಾಂಕ್ ಆ್ಯಕ್ಷನ್ ಕಟ್ ಹೇಳಿದ್ದರು. ಕೃಷ್ಣಗೆ ಬೃಂದಾ ಆಚಾರ್ಯ ಮತ್ತು ಮಿಲನಾ ನಾಗರಾಜ್ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ:ರೇವ್ ಪಾರ್ಟಿ ಪ್ರಕರಣ: ಹೇಮಾ, ಆಶಿ ರಾಯ್ ಬ್ಲಡ್ ರಿಪೋರ್ಟ್ ಪಾಸಿಟಿವ್
ಆದರೆ, ಈ ಬಾರಿ ಕೃಷ್ಣ ಅವರಿಗಾಗಿ ಥ್ರಿಲ್ಲಿಂಗ್ ಚಿತ್ರ ಮಾಡಲು ಮುಂದಾಗಿದ್ದಾರೆ. ಹೊಸ ಬಗೆಯ ಕಥೆಯನ್ನು ತೋರಿಸಲು ಶಶಾಂಕ್ ಮತ್ತು ಡಾರ್ಲಿಂಗ್ ಕೃಷ್ಣ ರೆಡಿಯಾಗಿದ್ದಾರೆ. ಇದನ್ನೂ ಓದಿ:ನಿರ್ದೇಶನದತ್ತ ‘ರಂಗಿತರಂಗ’ ಚಿತ್ರದ ನಟ ನಿರೂಪ್ ಭಂಡಾರಿ
ಅಂದಹಾಗೆ, ಕೃಷ್ಣ ಆರ್‌ಸಿ ಸ್ಟುಡಿಯೋಸ್ ನಿರ್ಮಾಣದ ‘ಫಾದರ್’ (Father) ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಪ್ರಕಾಶ್ ರಾಜ್ ಮತ್ತು ತೆಲುಗು ನಟ ಸುನೀಲ್ ಸಹ ನಟಿಸಿದ್ದಾರೆ. ಜುಲೈನಲ್ಲಿ ‘ಫಾದರ್’ ಚಿತ್ರೀಕರಣವನ್ನು ಪೂರ್ಣಗೊಳಿಸುವನಿರೀಕ್ಷೆಯಿದ್ದು, ಶೀಘ್ರದಲ್ಲೇ ಶಶಾಂಕ್ ಅವರ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಸಾಥ್ ನೀಡಲಿದ್ದಾರೆ. ಆಗಸ್ಟ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ ಎನ್ನಲಾಗಿದೆ.