ಸ್ಯಾಂಡಲ್‌ವುಡ್ ನಟ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ (Milana) ದಂಪತಿ ಸದ್ಯ ಪೋಷಕರಾಗುತ್ತಿರುವ ಸಂತಸದಲ್ಲಿದ್ದಾರೆ. ಈ ಬೆನ್ನಲ್ಲೇ ದೂರದ ವಿದೇಶಕ್ಕೆ ಮಿಲನಾ, ಕೃಷ್ಣ ತೆರಳಿದ್ದಾರೆ. ಜೋಡಿಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಾರ್ಚ್ 7ರಂದು ಮಿಲನಾ ತಾಯಿಯಾಗುತ್ತಿರುವ ಸಿಹಿಸುದ್ದಿ ನೀಡಿದ್ದರು. ಈಗ ಈ ಜೋಡಿ ಟ್ರಾವೆಲ್ ಮೂಡ್‌ನಲ್ಲಿದ್ದಾರೆ. ಥೈಲ್ಯಾಂಡ್ ಮತ್ತು ಬಾಲಿಗೆ ಕೃಷ್ಣ ಮತ್ತು ಮಿಲನಾ ತೆರಳಿದ್ದಾರೆ. ಅಲ್ಲಿನ ಸುಂದರ ತಾಣಗಳಲ್ಲಿ ಮಿಲನಾ ಜೋಡಿ ಭೇಟಿ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಥೈಲ್ಯಾಂಡ್ ಫೋಟೋ ನೋಡಿ ಮಿಲನಾಗೆ ‘ತಾಯಿ ಲ್ಯಾಂಡ್’ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
ಕಡೆಯದಾಗಿ ಈ ಜೋಡಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶಶಾಂಕ್ ನಿರ್ದೇಶನ ಮಾಡಿದ್ದರು. ಇದನ್ನೂ ಓದಿ:ಕಾಮಾಕ್ಯ ದೇವಸ್ಥಾನಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ
ಸದ್ಯ ‘ಲವ್ ಮಾಕ್ಟೈಲ್ ಪಾರ್ಟ್ 3’ಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಈ ಚಿತ್ರದ ಕಥೆ ಕೂಡ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಮಾಹಿತಿ ಸಿಗಲಿದೆ.