ಮುದ್ದಾದ ಮಗಳ ಮುಖ ರಿವೀಲ್ ಮಾಡಿದ ಮಿಲನಾ ದಂಪತಿ

Public TV
1 Min Read
darling krishna

ಸ್ಯಾಂಡಲ್‌ವುಡ್ ನಟಿ ಮಿಲನಾ (Milana Nagaraj) ಇತ್ತೀಚೆಗೆ ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದರು. ಇದೀಗ ಮುದ್ದು ಮಗಳನ್ನು ಮನೆ ತುಂಬಿಸಿಕೊಂಡಿದ್ದಾರೆ. ಇನ್ನೂ ಮಗಳನ್ನು ಬರಮಾಡಿಕೊಳ್ಳುತ್ತಿರುವ ವಿಶೇಷ ವಿಡಿಯೋವನ್ನು ಮಿಲನಾ ದಂಪತಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ.

milana

ನಮ್ಮ ಪುಟ್ಟ ಪ್ರಪಂಚಕ್ಕೆ ಸ್ವಾಗತ ‘ಪರಿ’ (Pari) ಎಂದು ಅಡಿಬರಹ ನೀಡಿ ಮಗಳ ಸ್ಪೆಷಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ (Darling Krishna) ಮಗುವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡು ಪತ್ನಿ ಮಿಲನಾ ಜೊತೆಗೆ ಮನೆಯೊಳಗೆ ಕಾಲಿಟ್ಟಿದ್ದಾರೆ. ಈ ವೇಳೆ, ಮನೆಯ ತುಂಬಾ ಬಲೂನ್‌ಗಳಿಂದ ಅಲಂಕಾರ ಮಾಡಲಾಗಿದೆ. ಬಳಿಕ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ಗೆ ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಎಂಟ್ರಿ

ಡಾರ್ಲಿಂಗ್ ಕೃಷ್ಣ ಅವರು ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ‘ಪರಿ’ ಎಂದು ಮಗಳಿಗೆ ಚೆಂದದ ಹೆಸರನ್ನು ಇಟ್ಟಿದ್ದಾರೆ. ಇನ್ನೂ ಹಿಂದಿ ಭಾಷೆಯಲ್ಲಿ ‘ಪರಿ’ ಅಂದರೆ ಅಪ್ಸರೆ ಎಂದರ್ಥವಾಗಿದೆ. ಒಟ್ನಲ್ಲಿ ಮಗುವಿನ ಮುಖ ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ಮಗುವಿನ ಆಗಮನದ ಖುಷಿಯಲ್ಲಿರುವ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ.

ಅಂದಹಾಗೆ, ಕೃಷ್ಣ ಮತ್ತು ಮಿಲನಾ ಜೋಡಿ ಹಲವು ವರ್ಷಗಳ ಪ್ರೀತಿಗೆ 2021ರಲ್ಲಿ ಮದುವೆಯ ಮುದ್ರೆ ಒತ್ತಿದ್ದರು.

Share This Article