ಬೆಂಗಳೂರು: ದರ್ಗಾಕ್ಕೆ ಹೋಗುವವರನ್ನು ತಡೆಯಬೇಡಿ. ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು ಎಂದು ಬೆಂಗಳೂರು ಕರಗದ ಬಗ್ಗೆ ಋಷಿಕುಮಾರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಶ್ರೀಭೀಮಲಿಂಗೇಶ್ವರ ದೇವಾಲಯ ವಿವಾದದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಗಾಕ್ಕೆ ಹೋಗುವವರನ್ನು ತಡೆಯಬೇಡಿ. ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು. ಬೆಂಗಳೂರಿನ ಕರಗಕ್ಕೆ 5,000 ವರ್ಷಗಳ ಇತಿಹಾಸವಿದೆ. ಧರ್ಮರಾಯನ ದೇವಸ್ಥಾನವಿದೆ ದ್ರೌಪದಿ ಪಂಚಪತಿಯರನ್ನು ಸುತ್ತು ಹಾಕಿದ್ದರ ಪ್ರತೀಕ ಈ ದೇವಸ್ಥಾನ. ಪಾಂಡವರು ಮತ್ತು ದ್ರೌಪದಿ ಈ ದೇವಸ್ಥಾನಕ್ಕೆ ಸುತ್ತು ಹಾಕಿರುವ ಪ್ರತೀಕವಾಗಿ ಇಲ್ಲಿ ಐದು ದೇವಾಲಯಗಳಿವೆ ಎಂದರು. ಇದನ್ನೂ ಓದಿ: ಆಲ್‍ಖೈದಾ ಉಗ್ರನನ್ನು RSS ಮುಖಂಡ ಅಂದ್ರೂ ಆಶ್ಚರ್ಯವಿಲ್ಲ- ಸಿದ್ದು ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಿಡಿ
Advertisement
Advertisement
ಭೀಮಲಿಂಗೇಶ್ವರ ಇದ್ದ ಜಾಗ ದರ್ಗಾವಾಗಿದೆ. ದರ್ಗಾ ಆಗಿದೆಯೇ, ಅಥವಾ ಮಹಲ್ ಆಗಿದೆಯೋ ಗೊತ್ತಿಲ್ಲ. ಹಿಂದೆ ಕೊಳದ ಮಠದ ಆಶ್ರಯದಲ್ಲಿ ಭೀಮಲಿಂಗೇಶ್ವರ ದೇವಾಲಯವಿತ್ತು. ಕೊಳದ ಮಠದ ಜಾಗ ಇದೀಗ ಲಾಲ್ ಬಾಗ್, ಕಬ್ಬನ್ ಪಾರ್ಕ್ ಆಗಿದೆ. ಇದೀಗ ದರ್ಗಾ ಇರುವ ಜಾಗ ಭೀಮಲಿಂಗೇಶ್ವರ ದೇವಾಲಯದ್ದು ಈಗಿರುವ ದರ್ಗಾ 500 ವರ್ಷ ಇತಿಹಾಸವಿರುವ ಪುರಾತನವಾದ ಭೀಮಲಿಂಗೇಶ್ವರನ ಜಾಗ. ಟಿಪ್ಪು ಸುಲ್ತಾನನ ಮೂರು ಯೋಧರ ಪೈಕಿ ಒಬ್ಬರು ಸತ್ತಾಗ ಅಂತ್ಯಸಂಸ್ಕಾರ ಮಾಡಲು ಸ್ಥಳವಿಲ್ಲದೇ ಒಬ್ಬ ಯೋಧನ ಅಂತ್ಯಸಂಸ್ಕಾರ ಮಾಡಿದ ಜಾಗವಾಗಿತ್ತು. ಈ ಸ್ಥಳಕ್ಕೆ ಕರಗ ತೆರಳಲೇಬೇಕು ಎಂದು ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಕೇಸ್‍ಗೆ ಟ್ವಿಸ್ಟ್ – ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ ಅಂದ ಯುವತಿ
Advertisement