ಮುಂಬೈ: ಸದ್ಯಕ್ಕೆ ಅನುರಾಗ್ ಕಷ್ಯಪ್ ನಿರ್ದೇಶನದ ಮನ್ ಮರ್ಜಿಯಾನ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿರೋ ತಾಪ್ಸಿ ಪನ್ನು ಮುಂದೆ ಮತ್ತೆರಡು ಚಿತ್ರಗಳು ಸರದಿಯಲ್ಲಿ ನಿಂತಿವೆ. ಮನ್ ಮರ್ಜಿಯಾನ್ ಚಿತ್ರದ ಜೊತೆ ಜೊತೆಗೇ ಈಕೆ ಬದ್ಲಾ ಚಿತ್ರಕ್ಕೂ ಅಣಿಗೊಳ್ಳುತ್ತಿದ್ದಾಳೆ. ಈ ಹಂತದಲ್ಲಿಯೇ ಮತ್ತೊಂದು ಚಿತ್ರವನ್ನೂ ಒಪ್ಪಿಕೊಂಡಿದ್ದಾಳೆ!
ಮನ್ ಮರ್ಜಿಯಾನ್ ಚಿತ್ರಕ್ಕಿಂತಲೂ ಸುಜಯ್ ಘೋಷ್ ನಿರ್ದೇಶನದ ಬದ್ಲಾ ಚಿತ್ರವೇ ಭಾರೀ ಸದ್ದು ಮಾಡಲಾರಂಭಿಸಿದೆ. ಯಾಕೆಂದರೆ ಈ ಹಿಂದೆ ಪಿಂಕ್ ಎಂಬ ಚಿತ್ರದ ಮೂಲಕ ತಾಪ್ಸಿ ಮತ್ತು ಅಮಿತಾಭ್ ಜೋಡಿ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಆ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಕೂಡಾ ಆಗಿತ್ತು. ಇದೀಗ ಅದೇ ಅಮಿತಾಭ್ ಮತ್ತು ತಾಪ್ಸಿ ಬದ್ಲಾ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿರೋದರಿಂದ ಸಹಜವಾಗಿಯೇ ಪ್ರೇಕ್ಷಕರು ಈ ಚಿತ್ರದತ್ತ ಆಕರ್ಷಿತರಾಗಿದ್ದಾರೆ.
ಇದೇ ಹೊತ್ತಿನಲ್ಲಿ ತಾಪ್ಸಿ ಪಂಜಾಬಿನ ಖ್ಯಾತ ಗಾಯಕ, ಗೀತರಚನೆಕಾರ, ನಟ ಹೀಗೆ ಎಲ್ಲವೂ ಆಗಿರುವ ಜಿಪ್ಪಿ ಗ್ರೇವಲ್ ಜೊತೆಗೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾಳೆ. ನಟನೂ ಆಗಿರೋ ಜಿಪ್ಪಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾನಂತೆ. ಈ ಹಿಂದೆ ತಾಪ್ಸಿ ಇದೇ ಜಿಪ್ಪಿಯ ಜೊತೆ ಪಂಜಾಬಿ ಚಿತ್ರದಲ್ಲಿ ನಟಿಸಿದ್ದಳು. ಆ ಚಿತ್ರದ ಮೂಲಕವೇ ಈಕೆಯ ನಟನಾ ಕೌಶಲ್ಯದ ಅನಾವರಣವಾಗಿ ಅವಕಾಶಗಳೂ ಸಿಗಲಾರಂಭಿಸಿದ್ದವು. ಇದೀಗ ಅದೇ ಸೆಂಟಿಮೆಂಟಿನೊಂದಿಗೆ ತಾಪ್ಸಿ ಆತ ನಿರ್ದೇಸನ ಮಾಡಲಿರೋ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾಳಂತೆ.
ಇದೀಗ ತಾಪ್ಸಿ ಮನ್ ಮರ್ಜಿಯಾನ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾಳೆ. ಇನ್ನೇನು ಒಂದೆರಡು ವಾರಗಳಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಅದಾದ ತಕ್ಷಣವೇ ಅಮಿತಾಬ್ ಜೊತೆ ನಟಿಸಲಿರೋ ಬದ್ಲಾ ಚಾಲೂ ಆಗಲಿದೆ. ಅದು ಮುಗಿದಾಕ್ಷಣವೇ ತಾಪ್ಸಿ ಜಿಪ್ಪಿ ಗ್ರೇವಲ್ ನಿರ್ದೇಶನದ ಚಿತ್ರವನ್ನು ಆರಂಭಿಸಲಿದ್ದಾಳಂತೆ.