ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಮುಖ್ಯ ಕೋಚ್ ಆಗಿ ಬ್ರಿಯಾನ್ ಲಾರಾ ಬದಲಿಗೆ ಡೇನಿಯಲ್ ವೆಟ್ಟೋರಿ (Daniel Vettori) ನೇಮಕಗೊಂಡಿದ್ದಾರೆ.
ವೆಟ್ಟೋರಿ ಅವರು ಈ ಹಿಂದೆ 2014 ರಿಂದ 2018ರ ವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿದ್ದರು. ಪ್ರಸ್ತುತ ಆಸ್ಟ್ರೇಲಿಯಾ ಪುರುಷರ ತಂಡದೊಂದಿಗೆ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸನ್‍ರೈಸರ್ಸ್ ಆರು ಋತುಗಳಲ್ಲಿ ಟಾಮ್ ಮೂಡಿ (2019 ಮತ್ತು 2022), ಟ್ರೆವರ್ ಬೇಲಿಸ್ (2020 ಮತ್ತು 2021), ಮತ್ತು ಲಾರಾ (2023) ಅವರನ್ನು ಬದಲಿಸಿದೆ. 2023ರ ಐಪಿಎಲ್ ಸೀಸನ್‍ಗೆ ಮುಂಚಿತವಾಗಿ ಲಾರಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ತಂಡವು ನಾಲ್ಕು ಗೆಲುವುಗಳನ್ನು ದಾಖಲಿಸಿತ್ತು. ಬಳಿಕ ಹತ್ತು ಸೋಲುಗಳೊಂದಿಗೆ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದನ್ನೂ ಓದಿ: ಈ ಸಲ ವಿಶ್ವಕಪ್ ನಮ್ದೆ – ರೋಹಿತ್ ಶರ್ಮಾ ವಿಶ್ವಾಸ
ಇದು 2024ರ ಋತುವಿಗಾಗಿ ಮೂರನೇ ಉನ್ನತ ಮಟ್ಟದ ಕೋಚಿಂಗ್ ನೇಮಕಾತಿಯಾಗಿದೆ. ಜಸ್ಟಿನ್ ಲ್ಯಾಂಗರ್ ಲಕ್ನೋ ಸೂಪರ್ ಜೈಂಟ್ಸ್‍ನಲ್ಲಿ ಆಂಡಿ ಫ್ಲವರ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು. ನಂತರ ಫ್ಲವರ್ ಅದೇ ಸ್ಥಾನಕ್ಕೆ ಆರ್‌ಸಿಬಿಗೆ ಸೇರ್ಪಡೆಗೊಂಡರು.
2016 ರಿಂದ 2020 ರವರೆಗೆ ಸನ್‍ರೈಸರ್ಸ್ ಪ್ರತಿ ಋತುವಿನಲ್ಲೂ ಪ್ಲೇಆಫ್‍ಗಳನ್ನು ತಲುಪಿತ್ತು. ಆದರೆ ಆ ಯಶಸ್ಸನ್ನು ಪುನರಾವರ್ತಿಸಲು ಟೀಂ ವಿಫಲವಾಗಿದೆ. ಈಗ ವೆಟ್ಟೋರಿ ಮತ್ತು ಏಡೆನ್ ಮಾಕ್ರ್ರಾಮ್ ಅವರ ಮಾರ್ಗದರ್ಶನದ ಮೂಲಕ ಮತ್ತೆ ಹಳೆಯ ಲಯಕ್ಕೆ ಮರಳಲು ಮುಂದಾಗಿದೆ.
ಐಪಿಎಲ್ (IPL) 2021 ರಿಂದ ಸನ್‍ರೈಸರ್ಸ್ ಕೇವಲ 13 ಪಂದ್ಯಗಳನ್ನು ಗೆದ್ದಿದೆ. ಅಲ್ಲದೇ 29 ಪಂದ್ಯಗಳಲ್ಲಿ ಸೋಲು ಕಂಡಿದೆ. ಇದು ಕೋಚ್‍ಗಳ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ಈ ಹಿಂದೆ ಐಪಿಎಲ್‍ನಲ್ಲಿ ಮುಖ್ಯ ತರಬೇತುದಾರರಾಗಿ ವೆಟ್ಟೋರಿ 2015ರಲ್ಲಿ ಆರ್‍ಸಿಬಿಗೆ ಪ್ಲೇಆಫ್‍ಗೆ ಮತ್ತು 2016 ರಲ್ಲಿ ಫೈನಲ್‍ಗೆ ಪ್ರವೇಶಿಸಲು ಸಹಕರಿಸಿದ್ದರು. ಇದನ್ನೂ ಓದಿ: ನಮ್ಮ ಬ್ಯಾಟಿಂಗ್ ಕಳಪೆಯಾಗಿತ್ತು – ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಪಾಂಡ್ಯ ಬೇಸರ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]