ಖಡಕ್ ಚಾಯ್ ಕ್ಯಾನ್ಸರ್‌ಕಾರಕ – ಪಬ್ಲಿಕ್ ಟಿವಿ ಬಿಚ್ಚಿಡ್ತಿದೆ ನಕಲಿ ಟೀ ಪುಡಿ ದಂಧೆ

Public TV
3 Min Read
danger tea copy

ಬೆಂಗಳೂರು: ಪ್ರತಿದಿನ ಸ್ಟ್ರಾಂಗ್ ಆಂಡ್ ಟೆಸ್ಟಿ ಟೀ ಎಲ್ಲರೂ ಕುಡಿಯುತ್ತಾರೆ. ಆದರೆ ಎಲ್ಲರೂ ಕುಡಿಯುವ ಟೀ ಅಸಲಿ ನಾ, ನಕಲಿ ನಾ ಎಂದು ಪಬ್ಲಿಕ್ ಟಿವಿ ಬೆಂಗಳೂರಿನ ಹಲವೆಡೆ ರಹಸ್ಯ ಕಾರ್ಯಾಚರಣೆ ನಡೆಸಿದೆ. ಈ ವೇಳೆ ವಿಷ ರಾಸಾಯನಿಕಯುಕ್ತ ಕಲರ್ ಟೀ ಪುಡಿಗಳು ಸಿಕ್ಕಿವೆ.

ಸದಾ ಜನಜಂಗುಳಿಯಿಂದ ಕೂಡಿರುವ ಮಾರ್ಕೆಟ್‍ನ ಬಸ್ ಸ್ಟಾಪ್ ಪಕ್ಕದಲ್ಲಿಯೇ ಸಾಲು ಸಾಲು ನಕಲಿ ಚಹಾ ಪುಡಿ ಮಾರುವ ಸ್ಟಾಲ್ ಗಳು ತಲೆಯೆತ್ತಿವೆ. ಈ ಅಂಗಡಿಗಳಲ್ಲೇ ಟೀ ಪುಡಿಗೆ ಅಪಾಯಕಾರಿ ಹಾಗೂ ನಿಷೇಧಿತ ಕಲರ್ ಮಿಕ್ಸ್ ಮಾಡಿ ಕೊಡುತ್ತಾರೆ. ಈ ಬಗ್ಗೆ ಸ್ವತಃ ಅಂಗಡಿಯವರೇ ಒಪ್ಪಿಕೊಳ್ಳುತ್ತಾರೆ.

danger tea 4

ಪ್ರತಿನಿಧಿ: ನಮಗೆ ಕಲರಿಂಗ್ ಇರೋ ಚಹಾ ಪುಡಿ ಬೇಕು.
ವ್ಯಾಪಾರಿ: ಹಾ ಹಾ
ಪ್ರತಿನಿಧಿ: ನಮಗೆ ಇದು ಬೇಡ ಕಲರ್ ಬೇಕು
ವ್ಯಾಪಾರಿ: ಎಲ್ಲಾ ಮಿಕ್ಸ್ ಮಾಡಿದ್ರೇನೇ ಕಲರ್ ಬರೋದು
ಪ್ರತಿನಿಧಿ: ಟೆಸ್ಟ್ ಬರುತ್ತಾ?
ವ್ಯಾಪಾರಿ: ಹು
ಪ್ರತಿನಿಧಿ: ಕಲರ್ ಅದೆಲ್ಲಾ
ವ್ಯಾಪಾರಿ: ಇದ್ರಲ್ಲಿ ಕಲರ್ ಇದೆ, ಸಿಂಗಲ್ ಇದ್ರೆ ಬ್ಲಾಕ್ ಬರುತ್ತೆ. ಈಗ ಕಲರ್ ಬರುತ್ತೆ.

danger tea 5

ಚಿಕ್ಕಪೇಟೆಯ ಬೀದಿ ಬದಿಗಳಲ್ಲಿ ಕಲರ್ ಮಿಕ್ಸ್ ಮಾಡಿರುವ ಟೀ ಪುಡಿಯನ್ನು ರಾಜಾರೋಷವಾಗಿ ಮಾರಲಾಗುತ್ತಿದೆ. ನಾನಾ ಹೆಸರಿನಲ್ಲಿ ಕೆಲವೊಂದಿಷ್ಟು ಟೀ ಪುಡಿ ಮಾರಿದರೆ, ಮತ್ತೊಂದಿಷ್ಟು ಹೆಸರಿಲ್ಲದೇ ಲೂಸ್ ಹೆಸರಿನಲ್ಲಿ ಮಾರಾಟವಾಗುತ್ತಿದೆ.

ಕಲಾಸಿಪಾಳ್ಯದಲ್ಲೂ ಸಹ ಕಲರ್ ಟೀ ಪುಡಿ ಕೆಜಿಗೆ ಕೇವಲ 100ರೂ.ಯಿಂದ 120ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅಂಗಡಿಯವನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ,

ಪ್ರತಿನಿಧಿ: ನಾವು ಅಂಗಡಿ ಇಟ್ಟುಕೊಂಡಿದ್ದೇವೆ, ಹೋಲ್ ಸೇಲ್ ಆಗಿ ಪರ್ಚೆಸ್ ಮಾಡಬೇಕಿತ್ತು.
ವ್ಯಾಪಾರಿ: ಎಷ್ಟು ಬೇಕು?
ಪ್ರತಿನಿಧಿ: ಒಂದು ಟನ್ ಬೇಕಿತ್ತು?
ವ್ಯಾಪಾರಿ: ನಮ್ಮ ಹತ್ರ ಅಷ್ಟಿಲ್ಲ, ನಾವು ರಿಟೆಲ್ ಮಾರೋದು, ಕೆ.ಜಿಗೆ 220ರೂ
ಪ್ರತಿನಿಧಿ: ತೋರಿಸಿ ಯಾವುದು ಇದೆ
ವ್ಯಾಪಾರಿ: ಇದು ಕಲರ್ ಇದೆ, ಇನ್ನೊಂದು ಸಾದಾ
ಪ್ರತಿನಿಧಿ: ನಮ್ಮದು ಅಂಗಡಿ, ಹೋಟೆಲ್ ಇದೆ ಬೇಕಿತ್ತು?
ವ್ಯಾಪಾರಿ: ಹಾಗಿದ್ರೆ ಮಿಕ್ಸ್ ತೆಗೆದುಕೊಳ್ಳಿ

danger tea 3

ಇಂತಹ ಕಲಬೆರಕೆ ಟೀ ಪುಡಿಯನ್ನೇ ಬೆಂಗಳೂರಿನ ಹೋಟೆಲ್ ಗಳಲ್ಲಿ ಬಳಸಲಾಗುತ್ತದೆ ಎಂದು ಚಹಾ ವ್ಯಾಪಾರಿಗಳೇ ಹೇಳಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ನಿಯಂತ್ರಣ ಕಾಯ್ದೆಯಂತೆ ಚಹಾಪುಡಿಗೆ ಯಾವುದೇ ಕಲರ್ ಮಿಕ್ಸ್ ಮಾಡುವ ಹಾಗಿಲ್ಲ. ಹೀಗೆ ನಾವು ಸಂಗ್ರಹಿಸಿದ ಟೀ ಪುಡಿಯನ್ನು, ಪರೀಕ್ಷಿಸಿದ ಆಹಾರ ತಜ್ಞರು, ಕೆಮಿಕಲ್ ಕಲರ್ ಹೊಂದಿರುವ ಚಹಾ ಪುಡಿಗಳನ್ನು ಪತ್ತೆ ಹಚ್ಚಿದ್ದರು.

danger tea 1

ಒಂದು ಗ್ಲಾಸ್ ತಣ್ಣೀರಿನಲ್ಲಿ ಚಹಾ ಪುಡಿ ಹಾಕಿದರೆ ಸಾಕು, ಟೀ ಪುಡಿಯಲ್ಲಿ ಸೇರಿರುವ ಬ್ಯಾನ್ ಬಣ್ಣ ಬಿಟ್ಟುಕೊಳ್ಳುತ್ತದೆ. ಹೀಗೆ ಪ್ರಯೋಗಿಸಿದ ಈ ಟೀ ಪುಡಿಯಲ್ಲಿ ಟಾರ್ ಅಥವಾ ಪೆಟ್ರೋಲಿಯಂ ಕಲರ್ ಹಾಕಲಾಗಿರುತ್ತೆ. ಜನರಿಗೆ ಟೀ ಚಟವಾಗಿಸಲು, ಅನೇಕ ಕಿಕ್ ಕೊಡುವ ವಸ್ತುಗಳನ್ನು ಮಿಕ್ಸ್ ಮಾಡುತ್ತಾರೆ. ಹೆಚ್ಚಿನ ಲಾಭಗಳಿಸಲು ಹೀಗೆ ಮಾಡುತ್ತಾರೆ ಎಂದು ಆಹಾರ ತಜ್ಞರು ಹೇಳುತ್ತಾರೆ.

danger tea 2

ಕಲಬೆರಕೆ ಟೀ ಕುಡಿಯುವುದರಿಂದ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಈ ಕೃತಕ ಬಣ್ಣಗಳನ್ನು ದೇಹ ಗುರುತಿಸಲಿಕೆ ಆಗುವುದಿಲ್ಲ. ವಾಂತಿ, ಹೊಟ್ಟೆ ನೋವು ಸಂಭವಿಸಿ ಹೃದಯ, ಕಿಡ್ನಿ, ಲಿವರ್ ಗೆ ಏಟು ಬೀಳುವ ಸಾಧ್ಯತೆಯಿದೆ. ಈ ಟೀಯ ಪ್ರತಿ ಗುಟುಕಿನಲ್ಲೂ ಕ್ಯಾನ್ಸರ್ ಕಾರಕ ರಾಸಾಯನಿಕ ಇರುವ ಕಾರಣ ಕಿಡ್ನಿ ವೈಫಲ್ಯವಾಗಬಹುದು

ಈ ನಕಲಿ ಟೀ ಪುಡಿ ಕಂಡು ಸ್ವತಃ ವೈದ್ಯರೇ ಶಾಕ್ ಆಗಿದ್ದಾರೆ. ಈ ಕಲಬೆರಕೆ ಸ್ಲೋ ಪಾಯಿಸನ್‍ನಂತೆ ನಮ್ಮ ದೇಹ ಹೊಕ್ಕುತ್ತಿದೆ. ಈ ಸುದ್ದಿ ಪಬ್ಲಿಕ್ ಟಿವಿಯ ನ್ಯೂಸ್ ಕೆಫೆಯಲ್ಲಿ ಪ್ರಸಾರವಾಗಿದ್ದು, ಈ ವಿಡಿಯೋ ಕೆಳಗಿದೆ;

Share This Article
Leave a Comment

Leave a Reply

Your email address will not be published. Required fields are marked *