– ಚಿಪ್ಸ್‌ನಲ್ಲೂ ಕಲಬೆರಕೆ – ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿ ದೃಢ
ಬೆಂಗಳೂರು: ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್, ಬಟಾಣಿ ಹಾಗೂ ಕಲ್ಲಂಗಡಿಗೆ ಬಳಸುವ ಕೃತಕ ಬಣ್ಣದಲ್ಲಿ ಆರೋಗ್ಯಕ್ಕೆ ಹಾನಿಯುಂಟು ಮಾಡುವಂತಹ ಅಂಶಗಳು ಪತ್ತೆಯಾಗಿರುವುದು ಆಹಾರ ಸುರಕ್ಷತಾ ಇಲಾಖೆ (Food Safety Department) ವರದಿಯಲ್ಲಿ ಬಹಿರಂಗವಾಗಿತ್ತು. ಇದೀಗ ಟೊಮೆಟೊ ಸಾಸ್ (Tomato Sauce) ಸರದಿ ಬಂದಿದೆ.
ಹೌದು.. ಆಹಾರ ಪ್ರಿಯರು ಬಾಯಿ ಚಪ್ಪರಿಸಿ ಸವಿಯುವ ಟೊಮೆಟೊ ಸಾಸ್‌ಗೆ ಅಪಾಯಕಾರಿ ರಾಸಾಯಾನಿಕ ಬಳಸುತ್ತಿರುವುದು ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿ ದೃಢವಾಗಿದೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ವರದಿ ಹೇಳಿದೆ. ಇದನ್ನೂ ಓದಿ: ಅಂತರರಾಜ್ಯಗಳಿಗೆ ಸಂಚರಿಸೋ ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಆರ್‌ಟಿಓ ಗುಡ್‌ನ್ಯೂಸ್
ವಿವಿಧ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಬಳಕೆಯಾಗುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಟೊಮೆಟೊ ಸಾಸ್ ತಪಾಸಣೆಗೂ ಮುಂದಾಗಿತ್ತು. ಕಳೆದ ಫೆಬ್ರವರಿಯಲ್ಲಿ ಟೊಮೆಟೊ ಸಾಸ್ ಮಾದರಿಗಳನ್ನ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಇದೀಗ ವರದಿ ಅಧಿಕಾರಿಗಳ ಕೈ ಸೇರಿದ್ದು, ವರದಿಯಲ್ಲಿ ಅನ್‌ಸೇಫ್ ಅಂತ ಬಂದಿರುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ʻಪಬ್ಲಿಕ್ ಟಿವಿʼಗೆ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಸರಣಿ ಕಳ್ಳತನ ಮಾಡಿ ಮಹಾ ಕುಂಭಮೇಳಕ್ಕೆ ಹೋಗಿದ್ದ ಇಬ್ಬರು ಅರೆಸ್ಟ್
ಏಕೆ ಅನ್‌ಸೇಫ್ – ಅಧಿಕಾರಿಗಳೂ ಹೇಳೋದೇನು?
ಸದ್ಯ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಟೊಮೆಟೊ ಸಾಸ್‌ಗಳಲ್ಲಿ ಸೋಡಿಯಂ ಬೆಂಜೊಯೆಟ್ ಎನ್ನುವ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗಿತ್ತು. ಇದರಲ್ಲಿ ಉಪ್ಪಿನ ಅಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಜೊತೆಗೆ ಟೊಮೆಟೊ ಸಾಸ್ ಬ್ರೈಟ್ ಮತ್ತು ರೆಡ್ ಆಗಿ ಕಾಣಿಸಲು ಕೃತಕ ಕಲ್ಲರ್ ಬಳಸಲಾಗುತ್ತದೆ. ಈ ಸಾಸ್‌ನಲ್ಲಿ ರಾಸಾಯನಿಕ ಬಳಕೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೊಮೆಟೊ ಸಾಸ್‌ನಲ್ಲಿ ರಾಸಾಯನಿಕ ಬಳಕೆಯಿಂದ ಉಪ್ಪಿನ ಪ್ರಮಾಣ ಅಧಿಕವಾಗಿರುತ್ತದೆ. ಈ ಸಾಸ್ ತಿನ್ನೋದ್ರಿಂದ ರಕ್ತದೊತ್ತಡ ಅಧಿಕವಾಗುತ್ತದೆ, ನಿಶಕ್ತಿಗೆ ಕಾರಣವಾಗುತ್ತದೆ. ಮಕ್ಕಳಲ್ಲಿ ತಾಳ್ಮೆ ಮತ್ತು ಶಾಂತ ಮನಸ್ಥಿತಿ ಕಡಿಮೆಯಾಗುತ್ತದೆ. ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಏರ್‌ಪೋರ್ಟ್‌ನಲ್ಲಿ ಐಪಿಎಸ್ ಅಧಿಕಾರಿ ಸಂಬಂಧಿ ವಶಕ್ಕೆ
ಟೊಮೆಟೊ ಸಾಸ್ ಅಷ್ಟೇ ಅಲ್ಲ ಬೆಲ್ಲ, ಚಿಪ್ಸ್, ಫ್ರೈ ಬಟಾಣಿ ಪದಾರ್ಥಗಳಿಗೂ ಕೂಡಲ ಕಲಬೆರಕೆ ಮಾಡುತ್ತಿರುವುದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ತಪಾಸಣೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಗುಡ್‌ನ್ಯೂಸ್ – ಖಾತೆಗೆ 1 ಲಕ್ಷ ರೂ. ಹಣ ಜಮೆ