ಚಿತ್ರದುರ್ಗ: ಬೈಕ್ ಗೇಮ್ ಚಾಲೆಂಜ್ ನಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಚಾಲನೆ ವೇಳೆ ಲಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮೂಲತಃ ಕೇರಳದ ಒಟ್ಟಾಪಾಲಂ ನಿವಾಸಿಯಾಗಿರುವ ಮಿಥುನ್ ಘೋಷ್ ಸಾವನ್ನಪ್ಪಿದ ಯುವಕ. ಈತ ಕೇರಳದ ಕಾಲೇಜುವ ಪಂಬಡಿ ನೆಹರು ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ.
Advertisement
ಮಿಥುನ್ ಅಮೆರಿಕದ ಸಂಸ್ಥೆ ನಡೆಸುವ ಆನ್ ಲೈನ್ `ಐರನ್ ಬೂಟ್’ ಭಾಗವಹಿಸಲು ಕೇರಳ ದಿಂದ ಪ್ರಯಾಣ ಬೆಳೆಸಿದ್ದ. ತನ್ನ ಸ್ವ-ಸ್ಥಳ ಒಟ್ಟಾಪಾಲಂ ನಿಂದ ಮಂಗಳವಾರ ಪ್ರಯಾಣ ಬೆಳೆಸಿದ್ದ ಮಿಥುನ್, ತನ್ನ ಪೋಷಕರಿಗೆ ಕೊಯಂಬತ್ತೂರ್ ಗೆ ತೆರಳುವುದಾಗಿ ಹೇಳಿದ್ದ. ಆದರೆ ಆತ ಐರನ್ ಗೇಮ್ ನಲ್ಲಿ ಭಾಗವಹಿಸಲು ತೆರಳಿದ್ದು, ಗೇಮ್ ನ ಭಾಗವಾಗಿ ಬೆಂಗಳೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳುತ್ತಿದ್ದ ವೇಳೆ ಲಾರಿಗೆ ಬೈಕ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ.
Advertisement
Advertisement
ಏನಿದು ಐರನ್ ಬೂಟ್ ಗೇಮ್: ಇದು ಅಮೆರಿಕ ಸಂಸ್ಥೆಯೊಂದು ನಡೆಸುವ ಆನ್ ಲೈನ್ ಬೈಕ್ ಗೇಮ್ ಆಗಿದ್ದು, ಒಂದೇ ದಿನದಲ್ಲಿ (24 ಗಂಟೆ) ಒಳಗೆ 1,624 ಕಿಮೀ ದೂರ ಬೈಕ್ ಸವಾರಿ ನಡೆಸುವ ಚಾಲೆಂಜ್ ಹೊಂದಿದೆ.
Advertisement
ಮೊದಲು ಬೈಕ್ ಮೀಟರ್ ಬೋರ್ಡ್ ಫೋಟೋ ತೆಗೆದು ಆದನ್ನು ಆನ್ ಲೈನ್ ವಿಳಾಸದಲ್ಲಿ ಪೋಸ್ಟ್ ಮಾಡಬೇಕಾಗುತ್ತದೆ. ಬಳಿಕ ಗೇಮ್ ನಲ್ಲಿ ಭಾಗವಹಿಸುವ ವ್ಯಕ್ತಿಯ ಜರ್ನಿ ಆರಂಭವಾಗುತ್ತದೆ. ಆತ 24 ಗಂಟೆಗಳಲ್ಲಿ ಗುರಿ ತಲುಪಬೇಕಿರುತ್ತದೆ. ಗುರಿ ತಲುಪಿದ ಬಳಿಕ ಆನ್ ಲೈನ್ ನಲ್ಲೇ ಬೈಕ್ ಮೀಟರ್ ಬೋರ್ಡ್ ಫೋಟೋ ಸಲ್ಲಿಸಿದರೆ ಆತನಿಗೆ ಆ ತಂಡದ ಸದಸ್ಯತ್ವ ಸಿಗುತ್ತದೆ.
ಐರನ್ ಬೂಟ್ ಗೇಮ್ ಚಾಲೆಂಜ್ ಪಡೆದಿದ್ದ ಮಿಥುನ್ ಕೊಯಾಂಬತ್ತೂರ್ ಮಾರ್ಗವಾಗಿ ಬೆಂಗಳೂರು, ಹುಬ್ಬಳ್ಳಿಗೆ ತೆರಳುವ ಯೋಜನೆ ನಿರ್ಮಿಸಿದ್ದ. ಈ ವೇಳೆ ಚಿತ್ರದುರ್ಗದ ಬಳಿ ಬೈಕ್ ಅಪಘಾತದಲ್ಲಿ ಗೇಮ್ ಪೂರ್ಣಗೊಳಿಸದೆ ಸಾವನ್ನಪ್ಪಿದ್ದಾನೆ.
ಬೆಳಕಿಗೆ ಬಂದಿದ್ದು ಹೇಗೆ: ಮಿಥುನ್ ಸಾವಿನ ಬಳಿಕ ಆತನ ಬಗ್ಗೆ ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ವೇಳೆ ಆತನ ಪೋಷಕರಿಗೆ ಕೇರಳ ಪೊಲೀಸರು ಮಾಹಿತಿ ನೀಡಿದ್ರು. ಆಗ ಮಿಥುನ್ ಕೊಠಡಿಯನ್ನು ಪರಿಶೀಲನೆ ನಡೆಸಿದ ವೇಳೆ ಆತ ಐರನ್ ಬೂಟ್ ಗೇಮ್ ನಲ್ಲಿ ಭಾಗವಹಿಸಿದ್ದ ಕುರಿತ ಮಾಹಿತಿ ತಿಳಿದುಬಂದಿದೆ. ಅಲ್ಲದೇ ಈ ಗೇಮ್‍ಗೆ ಸಂಬಂಧಿಸಿದ್ದ ಪೂರ್ಣ ಮಾಹಿತಿಯನ್ನು ಮಿಥುನ್ ತಿಳಿದಿದ್ದ. ಈಗಾಗಲೇ ಜಗತ್ತಿನಾದ್ಯಂತ ಈ ಚಾಲೆಂಜ್ ಪಡೆದು ಸುಮಾರು 60 ಸಾವಿರ ಮಂದಿ ಐರನ್ ಬೂಟ್ ಅಸೋಸಿಯೆಷನ್ ನಲ್ಲಿ ಸದಸ್ಯರಾಗಿದ್ದಾರೆ.