ಚಿಕ್ಕಮಗಳೂರು: ಗುಜರಾತ್‌ನಲ್ಲಿ (Gujarat) ನಡೆದ ಮೊರ್ಬಿ (Morbi) ದುರಂತ 141 ಜನರನ್ನು ಬಲಿಪಡೆದಿದೆ. ಕರ್ನಾಟಕದಲ್ಲಿ ಕೂಡ ಇಂತದ್ದೇ ಅಪಾಯಕಾರಿ ಸೇತುವೆಗಳು ಇವೆ. ಗುಜರಾತಿನ ಮೊರ್ಬಿ ಸೇತುವೆಯಷ್ಟೇ ನಮ್ಮಲ್ಲೂ ಡೇಂಜರ್ ಸೇತುವೆಗಳು ಇವೆ. ಪಬ್ಲಿಕ್ ರಿಯಾಲಿಟಿ ಚೆಕ್‌ನಲ್ಲಿ ಡೇಂಜರ್ ತೂಗು ಸೇತುವೆಗಳ ಬಣ್ಣ ಬಯಲಾಗಿದೆ.
Advertisement
ಕಿತ್ತು ಬಂದಿರುವ ತಂತಿಗಳು. ಗ್ರಿಪ್ಪೇ ಇಲ್ಲದೆ ಸಾಮರ್ಥ್ಯ ಕಳೆದುಕೊಂಡಿರೋ ಸೇತುವೆಯ ತಡೆಗೋಡೆಗಳು. ಒಬ್ಬರ ಓಡಾಡಕ್ಕೆ ಜೋತಾಡೋ ಸೇತುವೆ. ಇದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿರುವ ಮೇಲ್ಸೇತುವೆ. ಅಪಾಯಕ್ಕೆ ಕಾದಿರುವ ತೂಗು ಸೇತುವೆಯ ಬಣ್ಣ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ. ಇದನ್ನೂ ಓದಿ: ದೊಡ್ಡಗಣೇಶ ದೇಗುಲದಲ್ಲಿ ಚಪ್ಪಲಿ ಸ್ಟ್ಯಾಂಡ್‍ಗೂ ಮೀಸಲಾತಿ!
Advertisement
ಹೌದು, ಚಿಕ್ಕಮಗಳೂರು (Chikkamagaluru) ಜಿಲ್ಲೆ ಶೃಂಗೇರಿಯ ನೆಮ್ಮಾರು ಗ್ರಾಮದಲ್ಲಿ 20 ವರ್ಷಗಳ ಹಿಂದೆ ತುಂಗಾ ನದಿ ಮೇಲೆ ನಿರ್ಮಿಸಿದ ಸೇತುವೆ ಈಗ ಬೀಳುವ ಸ್ಥಿತಿಯಲ್ಲಿದೆ. ಇಲ್ಲಿನ ಸುಂಕದಮಕ್ಕಿ ಹಾಗೂ ಹೆಡದಾಳು ಗ್ರಾಮದ 150ಕ್ಕೂ ಹೆಚ್ಚು ಕುಟುಂಬಗಳಿಗೆ ಈ ಸೇತುವೆಯೇ ಆಧಾರ. ಇವರಿಗೆ ಬೇರೆ ಮಾರ್ಗ ಇದ್ರು 12 ಕಿ.ಮೀ. ಸುತ್ತಿ ಬರಬೇಕು. ಹಾಗಾಗಿ 20 ವರ್ಷಗಳ ಹಿಂದೆ ಸರ್ಕಾರವೇ ತೂಗುಸೇತುವೆ ನಿರ್ಮಿಸಿ ಕೊಟ್ಟಿತ್ತು. ಆದ್ರೆ ನಿರ್ವಹಣೆ ಇಲ್ಲದೆ ಸೇತುವೆ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿದೆ. ಸೇತುವೆಗೆ ಹಾಕಿರುವ ಗ್ರಿಲ್‌ಗಳು ಕಿತ್ತು ಬಂದಿವೆ. ಸೇತುವೆಯ ಫುಟ್‌ಪಾತ್ ಹಾಗೂ ತಡೆಗೋಡೆಗೆ ಹಾಕಿರೋ ಗ್ರಿಲ್‌ಗಳ ಜಾಯಿಂಟ್ ಕೂಡ ಬಿಟ್ಟಿದ್ದು ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟಬುತ್ತಿ.
Advertisement
Advertisement
ಸೇತುವೆ ಸ್ಥಿತಿ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಸ್ಥಳಕ್ಕೆ ಬಂದು ಹೋಗುವ ಅಧಿಕಾರಿಗಳ ಕಥೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ. ಒಂದು ವೇಳೆ ಈ ಸೇತುವೆ ಹಾಳಾದ್ರೆ, ಈ ಭಾಗದ ಜನ ಸಣ್ಣ ಕೆಲಸಕ್ಕೂ ಹೆದ್ದಾರಿಗೆ ಬರಬೇಕೆಂದ್ರೆ ಕನಿಷ್ಠ 12 ಕಿ.ಮೀ. ಸುತ್ತಿ ಬಳಸಿ ಬರಬೇಕು. ಈ ಸೇತುವೆ ನಿರ್ಮಾಣವಾದಗಿನಿಂದ ಒಂದೇ ಒಂದು ಬಾರಿ ಮಾತ್ರ ಬಣ್ಣ-ಗ್ರೀಸ್ ಕಂಡಿದೆ. ಮೊದಲೆಲ್ಲಾ 4-5 ಜನ ಓಡಾಡಿದ್ರು ಏನೂ ಆಗ್ತಿರಲ್ಲಿಲ್ಲ. ಈಗ ಒಬ್ಬಿಬ್ಬರು ಓಡಾಡುದ್ರೆ ತೂಗಾಡುತ್ತೆ, ಓಡಾಡೋಕೆ ಭಯವಾಗುತ್ತೆ ಅಂತಾರೆ ಸ್ಥಳೀಯರು. ಇದನ್ನೂ ಓದಿ: PSI ನೇಮಕಾತಿ ಅಕ್ರಮ – ಫಸ್ಟ್ ರ‍್ಯಾಂಕ್ ಪಡೆದಿದ್ದ ಸುಪ್ರಿಯಾ ಅರೆಸ್ಟ್
ಒಟ್ಟಾರೆ, ಸರ್ಕಾರ ಜನರಿಗೆಂದು ತೂಗು ಸೇತುವೆಯನ್ನೇನೋ ನಿರ್ಮಿಸಿ ಕೊಡ್ತು. ಆದ್ರೆ, ಅದರ ನಿರ್ವಹಣೆ ಮರೆತಿದೆ. ಸರ್ಕಾರವೇ ಮರೆತ ಕಾರಣ ಇಂದು ಆ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಅನಾಹುತವಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.