‘ದಂಗಲ್’ ಖ್ಯಾತಿಯ ನಟಿ ಸುಹಾನಿ ಹಠಾತ್ ಸಾವು

Public TV
1 Min Read
Suhani Bhatnagar 1

ಬಾಲಿವುಡ್ ನ ಹೆಸರಾಂತ ನಟ ಆಮೀರ್ ಖಾನ್ ನಟನೆಯ ದಂಗಲ್ (Dangal) ಸಿನಿಮಾದಲ್ಲಿ ಬಬಿತಾ ಪೋಗಟ್ (Babita Pogat) ಪಾತ್ರವನ್ನು ನಿರ್ವಹಿಸಿ ಅಸಂಖ್ಯಾತ ನೋಡುಗರ ಹೃದಯ ಕದ್ದಿದ್ದ 17ನೇ ವಯಸ್ಸಿನ ನಟಿ ಸುಹಾನಿ ಭಟ್ನಾಗರ್ (Suhani Bhatnagar) ಹಠಾತ್ ನಿಧನರಾಗಿದ್ದಾರೆ (Passed away). ಅವರು ತಗೆದುಕೊಳ್ಳುತ್ತಿದ್ದ ಔಷಧಿಯೇ ಅವರ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Suhani Bhatnagar 2

ಅತೀ ಸಣ್ಣ ವಯಸ್ಸಿನ ಈ ನಟಿಯ ಸಾವಿಗೆ ಬಾಲಿವುಡ್ ಕಂಬನಿ ಮಿಡಿದಿದೆ. ಆಪ್ತರ ಪ್ರಕಾರ ಸುಹಾನಿ ತಮ್ಮ ಕಾಲಿನ ಮೂಳೆ ಮುರಿತದ ಸಲುವಾಗಿ ಚಿಕಿತ್ಸೆ ಪಡೆದುಕೊಂಡು, ಅದಕ್ಕೆ ಸಂಬಂಧಿಸಿದ ಔಷಧಿ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಔಷಧಿಯ ಅಡ್ಡ ಪರಿಣಾಮದಿಂದಾಗಿ ಸಾವಿ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

ಸಾವಿನ ಕುರಿತಂತೆ ನಾನಾ ಸುದ್ದಿಗಳು ಹರಡಿದ್ದು, ಸಾವಿನ ಬಗ್ಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಆಕೆ ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನುವ ಮಾಹಿತಿ ಇದೆ.

Share This Article