ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

Public TV
1 Min Read
Zaira wasim

ಮುಂಬೈ: ಬಾಲಿವುಡ್‌ನ ದಂಗಲ್ ಸಿನಿಮಾದಲ್ಲಿ ನಟಿಸಿದ್ದ ಝೈರಾ ವಾಸಿಮ್ ಕರ್ನಾಟಕದ ಹಿಜಬ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಪ್ರೀತಿಸುವ ದೇವರು ತನ್ನ ಮೇಲೆ ವಿಧಿಸಿರುವ ಬಾಧ್ಯತೆ ಎಂದಿದ್ದು, ಹಿಜಬ್ ನಿಷೇಧವನ್ನು ಖಂಡಿಸಿದ್ದಾರೆ.

ಹಿಜಾಬ್ ಇಸ್ಲಾಂನ ಒಂದು ಬಾಧ್ಯತೆ, ಆಯ್ಕೆಯಲ್ಲ ಎಂದು ಹೇಳಿದ ಝೈರಾ ನಾನು ಕೃತಜ್ಞತೆ ಮತ್ತು ನಮ್ರತೆಯಿಂದ ಹಿಜಬ್ ಧರಿಸಿಸುತ್ತೇನೆ. ಕೇವಲ ಧಾರ್ಮಿಕ ಬದ್ಧತೆಯನ್ನು ನಿರ್ವಹಿಸುವುದಕ್ಕಾಗಿ ಮಹಿಳೆಯರನ್ನು ನಿಲ್ಲಿಸಿ ಕಿರುಕುಳ ನೀಡುತ್ತಿರುವ ಈ ಸಂಪೂರ್ಣ ವ್ಯವಸ್ಥೆಯನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ- ಮಡಿಕೇರಿ ಪ್ರಿನ್ಸಿಪಾಲರಿಗೆ ಜೀವ ಬೆದರಿಕೆ

 

View this post on Instagram

 

A post shared by Zaira Wasim (@zairawasim_)

ಅಮೀರ್ ಖಾನ್‌ರ ದಂಗಲ್ ಸಿನಿಮಾದಲ್ಲಿ ನಟಿಸಿದ್ದ ಝೈರಾ 2019ರಲ್ಲಿ ಬಾಲಿವುಡ್ ತೊರೆದಿದ್ದರು. ಇದೀಗ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಝೈರಾ ಕರ್ನಾಟಕದ ಹಿಜಬ್ ನಿಷೇಧ ಹಾಗೂ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಕಿರುಕುಳವನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

Zaira Wasim

ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ಹಾಗೂ ಹಿಜಬ್ ನಡುವೆ ಆಯ್ಕೆಯಾಗಿಸುವಂತೆ ಮಾಡಿರುವುದು ಅನ್ಯಾಯ. ಇದೆಲ್ಲವನ್ನೂ ಸಬಲೀಕರಣ ಹೆಸರಿನಲ್ಲಿ ಮಾಡಲಾಗುತ್ತಿದೆ. ಆದರೆ ಇದು ಮುಸ್ಲಿಮ್ ಮಹಿಳೆಗೆ ಪಕ್ಷಪಾತವಾಗಿದೆ ಎಂದು ತಿಳಿಸಿದ್ದಾರೆ.

Share This Article